Recent Posts

Sunday, January 19, 2025
ಬಂಟ್ವಾಳ

ಶ್ರೀರಾಮ ಪ್ರೌಢಶಾಲೆಯ ವತಿಯಿಂದ ವಿವಿಧ ಗ್ರಾಮಗಳಲ್ಲಿ ರಾಷ್ರ್ಟೀಯ ಪೋಷಣೆ ಅಭಿಯಾನ್ ಕಾರ್ಯಕ್ರಮ- ಕಹಳೆ ನ್ಯೂಸ್

ರಾಷ್ರ್ಟೀಯ ಪೋಷಣೆ ಅಭಿಯಾನ್ ಶ್ರೀರಾಮ ಪ್ರೌಢಶಾಲೆಯ ವತಿಯಿಂದ ವಿವಿಧ ಗ್ರಾಮಗಳಲ್ಲಿ ರಾಷ್ರ್ಟೀಯ ಪೋಷಣೆ ಅಭಿಯಾನ್ ಕಾರ್ಯಕ್ರಮ ನಡೆಸಲಾಯಿತು. ಸಜೀಪದ ಮಾಚಿದೇವ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ| ಸುಬ್ರಹ್ಮಣ್ಯ ಭಟ್ ಆಯುರ್ವೆದ ತಜ್ಞರು ಸಮತೋಲಿತ ಆಹಾರದ ಮಾಹಿತಿ ನೀಡಿ ಅಪೌಷ್ಟಿಕತೆ ನಿವಾರಣೆಗೆ ನಮ್ಮಲ್ಲಿಯೇ ದೊರೆಯುವ ಸಮತೋಲಿತ ಆಹಾರದ ಅಗತ್ಯತೆ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ 40 ಮಹಿಳೆಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನೆಟ್ಲ ಸರಸ್ವತಿ ಸದನದಲ್ಲಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ ಆಯುರ್ವೇದ ವೈದ್ಯೆ ಡಾ| ಸಿಂಧುಶ್ರೀ ಅಪೌಷ್ಟಿಕತೆ ನಿವಾರಿಸಲು ಯಾವ ಯಾವ ಆಹಾರಗಳನ್ನು ಮಕ್ಕಳು ಮತ್ತು ಮಹಿಳೆಯರು ಸೇವಿಸಬೇಕೆಂಬ ಸಂಪೂರ್ಣ ಮಾಹಿತಿಯನ್ನು ನೀಡಿದರು. ಮಕ್ಕಳು ಮತ್ತು ಮಹಿಳೆಯರು ಸೇರಿ 42 ಮಂದಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ನಡೆದ ರಾಷ್ರ್ಟೀಯ ಪೋಷಣ್ ಅಭಿಯಾನ್ ಕಾರ್ಯಕ್ರಮವನ್ನು ಡಾ| ಸಂದೀಪ್.ಎಚ್.ಎಸ್. ಮಕ್ಕಳ ತಜ್ಞರು, ಹಾಗೂ ಡಾ| ಅನನ್ಯ ಲಕ್ಷ್ಮೀ ಸಂದೀಪ್ ಇವರು ನಡೆಸಿಕೊಟ್ಟರು. ಗರ್ಭಿಣಿ ಸ್ತ್ರೀಯರು, ಸಣ್ಣ ಮಕ್ಕಳು, ಮಹಿಳೆಯರಲ್ಲಿ ಅಪೌಷ್ಟಿಕತೆ ಯಾಕೆ ಬರುತ್ತವೆ ಮತ್ತು ಹೋಗಲಾಡಿಸಲು ಯಾವ ಆಹಾರಗಳನ್ನು ಸೇವಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು. 60 ಮಂದಿ ಭಾಗವಹಿಸಿದರು.

 

ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲರಿಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತಯಾರಿಸಿಕೊಳ್ಳಬಹುದಾದ ಕಷಾಯದ ಬಗ್ಗೆ ಪ್ರಾತ್ಯಕ್ಷಿಕೆ ಮಾಡಿ, ನಂತರ ಎಲ್ಲರಿಗೂ ಕುಡಿಯಲು ಕಷಾಯ ನೀಡಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂತ ಕಾರ್ಯಕಾರಿಣಿ ಸದಸ್ಯೆಯಾಗಿರುವ ಡಾ| ಕಮಲಾ ಭಟ್ ಹಾಗೂ ಬಾಳ್ತಿಲ ಗ್ರಾಮ ಪಂಚಾಯತ್ ಸದಸ್ಯೆ ಹಿರಣ್ಮಯಿ, ಶಾಲಾಭಿವೃದ್ದಿ ಸಮಿತಿಯ ಸದಸ್ಯರು, ಶೈಕ್ಷಣಿಕ ಪರಿವೀಕ್ಷಕರು ಸುಧಾ ಭಟ್ ಮುಖ್ಯೋಪಾಧ್ಯಾಯರರಾದ ಶಾಂಭವಿ ಹಾಗೂ ಅಧ್ಯಾಪಕ ವೃಂದದವರು ಪಾಲ್ಗೊಂಡರು.