Recent Posts

Sunday, January 19, 2025
ಕಡಬಸುಬ್ರಹ್ಮಣ್ಯ

ಗಾಂಧಿ ಜಯಂತಿ ಹಾಗೂ ಅಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಸುಬ್ರಹ್ಮಣ್ಯ ಗ್ರಾ.ಪಂ ವಿಶೇಷ ಗ್ರಾಮ ಸಭೆ ಹಾಗೂ ಸ್ವಚ್ಚತಾ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ- ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಗಾಂಧಿ ಜಯಂತಿ ಹಾಗೂ ಅಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ವಿಶೇಷ ಗ್ರಾಮ ಸಭೆ ಹಾಗೂ ಸ್ವಚ್ಚತಾ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‍ನಲ್ಲಿ ನಡೆಯಿತು. ಬಳಿಕ ಕಡಬ ತಾಲೂಕು ಸೋಕ್ ಪಿಟ್ ಅಭಿಯಾನಕ್ಕೆ ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆಯ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಗುಂಡಡ್ಕ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ ಎಸ್ ಪಿ ಯು ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ, ಗ್ರಾ.ಪಂ ನ ಸ್ವಚ್ಚತಾ ಸಿಬ್ಬಂದಿಗಳಾದ ಹೇಮಾವತಿ, ಪುಷ್ಪಾವತಿ, ವಿಮಲ, ಕಮಲಾಕ್ಷಿ, ಮುತ್ತುಲಕ್ಷ್ಮೀ, ತೇಜಕುಮಾರ, ಶರತ್ ಅವರುಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಸವಿತಾ ಭಟ್, ಸಮಾಜ ಸೇವಕ ರವಿಕಕ್ಕೆಪದವು, ಏನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ, ಸುಬ್ರಹ್ಮಣ್ಯ ರೋಟರಿ ಕಾರ್ಯದರ್ಶಿ ಶಿವರಾಮ ಏನೆಕಲ್ಲು, ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸಚಿತಾ ಗೋಪಾಲ, ಕಡಬ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಚೆನ್ನಪ್ಪ ಕಜೆಮೂಲೆ, ಸುಬ್ರಹ್ಮಣ್ಯ ಗ್ರಾ.ಪಂ ಪಿಡಿಒ ಯು ಡಿ ಶೇಖರ್, ವರ್ತಕರ ಸಂಘದ ಅಧ್ಯಕ್ಷ ಶಿವಕುಮಾರ್ ಕಾಮತ್, ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಕೆ, ಸುಬ್ರಹ್ಮಣ್ಯ ಜೇಸೀ ಅಧ್ಯಕ್ಷ ದೀಪಕ್ ನಂಬಿಯಾರ್, ಯುವ ಬ್ರಿಗೇಡ್ ನ ಕಾರ್ತಿಕ್, ಕುಲ್ಕುಂದ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿಶುಪಾಲ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಜಾತ ಗಣೇಶ್, ನಿಸರ್ಗ ಯುವಕ ಮಂಡಲದ ಐನೆಕಿದು ಇದರ ಅಧ್ಯಕ್ಷ ಲಕ್ಷ್ಮೀಶ ಇಜಿನಡ್ಕ ಉಪಸ್ಥಿತರಿದ್ದರು. ಗ್ರಾ.ಪಂ ಸದಸ್ಯ ಭಾರತಿ ದಿನೇಶ್ ಸ್ವಾಗತಿಸಿ, ಗ್ರಾ.ಪಂ ಸದಸ್ಯ ವೆಂಕಟೇಶ್ ಎಚ್ ಎಲ್ ವಂದಿಸಿದರು. ದಿಲೀಪ್ ಉಪ್ಪಳಿಕೆ ಕಾರ್ಯಕ್ರಮ ನಿರೂಪಿಸಿದರು.