ವಿದ್ಯುತ್ ಲೈನ್‍ಗೆ ತಾಗಿಕೊಂಡಿದ್ದ ತೆಂಗಿನ ಮರದ ಗರಿ ಕೀಳುವ ವೇಳೆ ಆಕಸ್ಮಿಕ ವಿದ್ಯುತ್ ಅವಘಡ: ಸಕಾಲಿಕ ಪ್ರಥಮ ಚಿಕಿತ್ಸೆಯಿಂದ ಮರುಜೀವ ನೀಡಿದ ಅಸೀಫ್ ಕುಂಟಿನಿ-ಕಹಳೆ ನ್ಯೂಸ್
ಬೆಳ್ತಂಗಡಿ: ತೆಂಗಿನಮರದ ಗರಿ ವಿದ್ಯುತ್ ಲೈನ್ ಗೆ ತಾಗಿಕೊಂಡಿದ್ದನ್ನು ತೆಗೆಯಲು ಮರ ಹತ್ತಿದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಟಿ.ಬಿ.ಕ್ರಾಸ್ ಬಳಿ ನಡೆದಿದೆ. ಟಿ.ಬಿ.ಕ್ರಾಸ್ ನಿವಾಸಿ ರಿಜ್ಞಾನ್ ತನ್ನ ಮನೆಯ ಅಂಗಳದಲ್ಲಿರುವ ತೆಂಗಿನಮರದ ಗರಿ ವಿದ್ಯುತ್ ತಂತಿಗೆ ತಾಗಿಕೊಂಡಿದ್ದನ್ನು ಗಮನಿಸಿದ್ದಾರೆ. ತೆಂಗಿನ ಗರಿ ಕೆಳಗೆ ಎಳೆದು ಹಾಕಲು ಮರ ಹತ್ತಿದ ವೇಲೆ ಆಕಸ್ಮಿಕವಾಗಿ ವಿದ್ಯುತ್ ಪ್ರವಾಹಿಸಿ ಎಸೆಯಲ್ಪಟ್ಟು ಮನೆಯ ಅಂಗಳಕ್ಕೆ ಬಿದ್ದಿದ್ಯಾರೆ. ಇದನ್ನು ಕಂಡು ಆತನ ತಾಯಿ ಬೊಬ್ಬೆ ಹೊಡೆದಿದ್ದು, ಪಕ್ಕದ ಮನೆಯಲ್ಲಿ ಫೈಂಟಿಂಗ್ ಕೆಲಸ ನಿರ್ವಹಿಸುತ್ತಿದ್ದ ಉಜಿರೆ ಕುಂಟಿನಿ ನಿವಾಸಿ ಆಸೀಫ್ ಎಂಬವರು ಕೂಡಲೇ ಸ್ಥಳಕ್ಕೆ ಧಾವಿಸಿ, ಗಂಭೀರ ಸ್ಥಿತಿಯಲ್ಲಿದ್ದ ರಿಝಾನ್ ರವರಿಗೆ ಸುಮಾರು 20 ನಿಮಿಷಗಳ ಕಾಲ ಕೃತಕ ಉಸಿರಾಟವನ್ನು ನೀಡುವ ಮುಖಾಂತರ ಸಾವಿನಂಚಿನಲ್ಲಿದ್ದ ಯುವಕನ್ನು ಬದುಕಿಸಿ ಜೀವದಾನ ನೀಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ರಿಜ್ವಾನ್ ರವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯುತ್ ಪುವಾಹದಿಂದ ಹೊಟ್ಟೆ ಭಾಗ ಸುಟ್ಟ ಗಾಯವಾಗಿದ್ದು ಆಸೀಫ್ ರವರ ಸೂಕ್ತ ಸಮಯ ಪ್ರಜ್ಞೆಯಿಂದಾಗಿ. ರಿಜ್ವಾನ್ ಪ್ರಾಣ ಉಳಿದಿದ್ದು ಇದೀಗ ಅಸೀಫ್ ಕಾರ್ಯಕ್ಕೆ ಸ್ಥಳೀಯರು ಮಚ್ಚುಗ ವ್ಯಕ್ತಪಡಿಸಿದ್ದಾರೆ.