Recent Posts

Sunday, January 19, 2025
ಬಂಟ್ವಾಳ

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತ ಪರಿಷತ್ (ನೋಂ) ಬಂಟ್ವಾಳ ತಾಲೂಕು ಘಟಕದ ವಿಶೇಷ ಸಭೆ-ಕಹಳೆ ನ್ಯೂಸ್

ಬಂಟ್ವಾಳ: ವೇದಮೂರ್ತಿ ಪೊಳಲಿ ವೆಂಕಪ್ಪಯ್ಯ ಭಟ್ ಅವರಿಗೆ ಸನ್ಮಾನ ಹಾಗು ಸಾಮೂಹಿಕ ಪವಮಾನ ಸೂಕ್ತ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಬದನಡಿಯಲ್ಲಿ ನಡೆಯಿತು. ಬಳಿಕ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತ ಪರಿಷತ್ ನೋಂದಣಿ ಬಂಟ್ವಾಳ ತಾಲೂಕು ಘಟಕದ ವಿಶೇಷ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಬದನಡಿ ಕೊಯಿಲ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಎಂ.ಶಿವರಾಮಮಯ್ಯ ವಹಿಸಿದ್ದರು.

ಜಿಲ್ಲಾಧ್ಯಕ್ಷರಾದ ಪಿ.ಕೃಷ್ಣರಾಜ ಬಟ್ ಸಂಸ್ಥೆಯ ಮುಂದಿನ ನಡೆಯ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಕಾರ್ಯದರ್ಶಿ ಶ್ರೀನಿಧಿ ಮುಚ್ಚಿನ್ನಾಯ ಕಳೆದ ಮಹಾಸಭೆಯ ವರದಿ ವಾಚಿಸಿದರು. ಸಭೆಯಲ್ಲಿ ವಾಸುದೇವ ಬಟ್ ಬಾಲಕೃಷ್ಣ ಕಾರಂತ ಸುದರ್ಶನ ಬಲ್ಲಾಳ್ ಗಣೇಶ್ ಭಟ್ ನಾಗೇಶ ಹೊಳ್ಳ ವೇದವ್ಯಾಸ ಪಾಂಗಣ್ಣಯ ಮೊದಲಾದವರು ಉಪಸ್ಥಿತರಿದ್ದರು. ತಾಲೂಕು ಸಂಯೋಜಕರಾದ ಸುಬ್ರಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಸುಂದರ ಹೊಳ್ಳ ಧನ್ಯವಾದ ಸಮರ್ಪಿಸಿದರು.ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯ ದೇವಸ್ಥಾನ ಬದನಡಿ ಕೊಯಿಲ ಧಾರ್ಮಿಕ ದತ್ತಿ ಇಲಾಖೆ ಸಿ ದರ್ಜೆ ವ್ಯಾಪ್ತಿಯಲ್ಲಿ ಇದ್ದರೂ ಕರ್ನಾಟಕದ ದತ್ತಿ ಇಲಾಖ ವ್ಯಾಪ್ತಿಗೆ ಒಳಪಟ್ಟ ದೇವಾಲಯಗಳಿಗೆ ಹಿಂದೆ ಇದ್ದಂತ ತಸ್ತಿಕ್ 7₹.9₹.12₹.17₹21₹.30₹.41₹ ಬೇರೆ ಬೇರೆ ರೀತಿಯಾಗಿ ಸರಕಾರದಿಂದ ಪಾವತಿ ಯಾಗುತ್ತಿದ್ದು 2006ರಲ್ಲಿ ಕರ್ನಾಟಕದ ಇಲಾಖಾ ವ್ಯಾಪ್ತಿಯ ಎಲ್ಲಾ ದೇವಾಲಯಗಳಿಗೂ ತಲ 6000₹ ಏಕರೂಪದ ತಸ್ತಿಕ ವಿತರಿಸಿದ ಕೀರ್ತಿಯನ್ನು ಹೊಂದಿದ ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಮಾಜಿ ಸಚಿವರಾದ ಬಿ ನಾಗರಾಜಶೆಟ್ಟಿ ಈ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯರಾಗಿದ್ದು ಈ ತನಕ ಈ ದೇವಾಲಯಕ್ಕೆ ತಸ್ತಿಕ್ ಹಣ ಸಂದಾಯ ಆಗದೆ ಇರುವ ಬಗ್ಗೆ ದೇವಾಲಯದ ಪರವಾಗಿ ಎ0. ಸುಬ್ರಮಣ್ಯ ಬಟ್ ಜಿಲ್ಲಾ ಧಾರ್ಮಿಕ ಪರಿಷತ ಸದಸ್ಯರಾದ ಪೊಳಲಿ ಗಿರಿ ಪ್ರಕಾಶ ತಂತ್ರಿ ಅವರಿಗೆ ಮನವಿ ಮಾಡಿದಾಗ ಇಲಾಖಾ ವತಿಯಿಂದ ದೇವಾಲಯಗಳಿಗೆ ದೊರೆಯುವ ಎಲ್ಲಾ ಸೌಲಭ್ಯ ಒದಗಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು ವಾಸುದೇವ ಬಟ್ ಬಾಲಕೃಷ್ಣ ಕಾರಂತ ಸುದರ್ಶನ ಬಲ್ಲಾಳ್ ಗಣೇಶ್ ಭಟ್ ನಾಗೇಶ ಹೊಳ್ಳ ವೇದವ್ಯಾಸ ಪಾಂಗಣ್ಣಯ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು