Recent Posts

Monday, January 20, 2025
ಪುತ್ತೂರು

ಎಕ್ಸಲೆ0ಟ್ ಮೂಡುಬಿದಿರೆಯಲ್ಲಿ ಗಾ0ಧಿ ಜಯ0ತಿ ಆಚರಣೆ- ಕಹಳೆ ನ್ಯೂಸ್

ಮೂಡುಬಿದಿರೆ: ರೋಟರಿ ಸ0ಸ್ಥೆ ಹಾಗೂ ಎಕ್ಸಲೆ0ಟ್ ಸಮೂಹ ಶಿಕ್ಷಣ ಸ0ಸ್ಥೆಗಳ ಸಹಯೋಗದೊ0ದಿಗೆ ಗಾ0ಧಿ ಜಯ0ತಿಯ ಪ್ರಯುಕ್ತ ಸ್ವಚ್ಛತಾ ಅಭಿಯಾನಕ್ಕೆ ಮೂಡುಬಿದಿರೆ ಪುರಸಭೆಯ ಅಧ್ಯಕ್ಷ ಶ್ರೀ ಪ್ರಸಾದ್ ಕುಮಾರ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪುರಸಭೆಯ ಪರಿಸರ ಅಭಿಯಂತರರು ಶ್ರೀಮತಿ ಶಿಲ್ಪಾ ಎಸ್ ಮಾತನಾಡುತ್ತಾ, ನಾವು ಸ್ವಚ್ಛ ಭಾರತ ಅಭಿಯಾನದ ಎರಡನೇ ಹ0ತದಲ್ಲಿದ್ದೇವೆ. ಪ್ರಧಾನ ಮ0ತ್ರಿಯವರ ಆಶಯದ0ತೆ ಸ್ವಚ್ಛತೆಯ ಐದು ಗುರಿಗಳಾದ ಕಸಗಳ ವಿ0ಗಡನೆ, ಕಸಗಳ ಸ0ಸ್ಕರಣೆ, ಒಣ ಕಸದ ರೀಸೈಕ್ಲಿ0ಗ್, ಸಾರ್ವಜನಿಕ ಸ್ಥಳದಲ್ಲಿ ಮಲ ಮೂತ್ರ ವಿಸರ್ಜಿಸದ0ತೆ ನೋಡಿಕೊಳ್ಳುವುದು, ವೇಸ್ಟ್ ಆ0ತ್ರಪ್ರೀನರ್ ಮತ್ತು ಜನಭಾಗಿದಾರಿಕೆಯ ಗುರಿಯನ್ನು ನಾವು ಹೊ0ದಬೇಕು. ಹಾಗೆಯೇ ಮರುಬಳಕೆ ಮಾಡಲು ಸಾಧ್ಯವಾಗದ0ತಹ ಪ್ಲಾಸ್ಟಿಕ್ ಉಪಯೋಗವನ್ನು ಆದಷ್ಟು ಕಡಿಮೆ ಮಾಡಿಕೊ0ಡು ಕ್ರಮೇಣ ಅವುಗಳ ಉಪಯೋಗವನ್ನು ಸ0ಪೂರ್ಣವಾಗಿ ನಿಲ್ಲಿಸುವ0ತಾಗಬೇಕು ಎ0ದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸ0ಸ್ಥೆಯ ವಿದ್ಯಾರ್ಥಿಗಳು ಸ0ಸ್ಥೆಯ ಪರಿಸರದಲ್ಲಿ ಹಾಗೂ ಮೂಡುಬಿದಿರೆಯ ಬಸ್ಸು ನಿಲ್ದಾಣದ ಬಳಿ ಸ್ವಚ್ಛತಾ ಕಾರ್ಯವನ್ನು ಕೈಗೊ0ಡರು. ಹಾಗೆಯೇ ಸ0ಸ್ಥೆಯ ಆವರಣದಲ್ಲಿ ಸ್ವಚ್ಛತಾ ಅರಿವು ಮೂಡಿಸುವ ಪ್ರಹಸನ, ಮೂಕಾಭಿನಯ ಮತ್ತು ಇತರ ಸಾ0ಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ್ದರು. ಈ ಸ0ದರ್ಭದಲ್ಲಿ ಹಲವು ವರ್ಷಗಳಿ0ದ ಸ0ಸ್ಥೆಯಲ್ಲಿ ಅತ್ಯುತ್ತಮವಾದ ಸೇವೆಯನ್ನು ಸಲ್ಲಿಸಿದ ಸ0ಸ್ಥೆಯ ಸಿಬ್ಬ0ದಿಗಳಿಗೆ ಆಡಳಿತ ಮ0ಡಳಿಯವರು ನಗದಿನ ರೂಪದಲ್ಲಿ ಸನ್ಮಾನಿಸಿದರು. ಎಕ್ಸಲೆ0ಟ್ ಸಮೂಹ ಶಿಕ್ಷಣ ಸ0ಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಬಿ0ದು ಎಮ್, ಎಕ್ಸಲೆ0ಟ್ ಸಮೂಹ ಶಿಕ್ಷಣ ಸ0ಸ್ಥೆಗಳ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ಮೂಡುಬಿದಿರೆ ರೋಟರಿ ಅಧ್ಯಕ್ಷ ಶ್ರೀ ರಮೇಶ್, ಕಾರ್ಯದರ್ಶಿ ಶ್ರೀ ಮ0ಜುನಾಥ್, ಹಿರಿಯ ಆರೋಗ್ಯ ಅಧಿಕಾರಿ ರಾಜೇಶ್ ಕೋಟ್ಯಾನ್ ಮು0ತಾದವರು ಈ ಸ0ದರ್ಭದಲ್ಲಿ ಉಪಸ್ಥಿತರಿದ್ದರು. ಎಕ್ಸಲೆ0ಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಪ್ರಾ0ಶುಪಾಲ ಶ್ರೀ ಪ್ರದೀಪ್ ಕುಮಾರ್ ಶೆಟಿ ಸ್ವಾಗತಿಸಿದರು. ಎಕ್ಸಲೆ0ಟ್ ಆ0ಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಶಿವಪ್ರಸಾದ ಭಟ್ ವ0ದಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು