Recent Posts

Monday, January 20, 2025
ದಕ್ಷಿಣ ಕನ್ನಡರಾಜ್ಯಸುದ್ದಿ

ಮಂಗಳೂರಿಗೆ ಬಂತು ನಾರ್ತ್, ಸೌತ್ ಇಂಡಿಯನ್ ಮಾದರಿಯಲ್ಲಿ ಐಸ್ ಕ್ರೀಂ ಥಾಲಿ…! – ಏನಿದು ಅಂತೀರಾ….!? ಈ ಸ್ಟೋರಿ ನೋಡಿ…! – ಕಹಳೆ ನ್ಯೂಸ್

ಮಂಗಳೂರು : ರೆಸ್ಟೋರೆಂಟ್‌ಗಳಲ್ಲಿ ನಾರ್ತ್ ಇಂಡಿಯನ್ ಹಾಗೂ ಸೌತ್ ಇಂಡಿಯನ್ ಥಾಲಿ ಮಾಮೂಲು. ಇದೇ ಮಾದರಿ ಈಗ ಐಸ್‌ಕ್ರೀಂ ಪಾರ್ಲರ್‌ಗಳಲ್ಲಿ ಹೊಸ ಟ್ರೆಂಡ್ ಆಗಿ ಆರಂಭವಾಗಿದೆ. ಮಂಗಳೂರಿನ ಐಡಿಯಲ್ ಐಸ್‌ಕ್ರೀಂ ಮಾಲೀಕತ್ವದ ಪಬ್ಬಾಸ್ ಐಡಿಯಲ್ ಕೆಫೆಯಲ್ಲಿ `ಐಸ್‌ಕ್ರೀಂ ಥಾಲಿ’ ಶನಿವಾರದಿಂದ ಗ್ರಾಹಕರ ಬಾಯಿಚಪ್ಪರಿಸುತ್ತಿದೆ.

ಐಸ್‌ಕ್ರೀಂ ಥಾಲಿಯಲ್ಲಿ ಸೌತ್ ಅಥವಾ ನಾರ್ತ್ ಮೆನು ಇಲ್ಲ. ಇದು ಕೇವಲ ಐಸ್‌ಕ್ರೀಂಗಳ ಸಮುಚ್ಛಯ. ಸೌತ್, ನಾರ್ಥ್ ಇಂಡಿಯನ್ ಥಾಲಿ ಮಾದರಿಯಲ್ಲಿ ಇಲ್ಲಿ ಕೂಡ
ಐಸ್‌ಕ್ರೀಂ ಥಾಲಿ ರೂಪದಲ್ಲಿ ಗ್ರಾಹಕರಿಗೆ ಸಿಗುತ್ತದೆ. ಊಟದ ಮಾದರಿಯಲ್ಲೇ ಐಸ್‌ಕ್ರೀಂ ಥಾಲಿಯ ಮೆನು ಸಿದ್ಧಪಡಿಸಲಾಗಿದೆ. ಹಾಗಾಗಿ ಇದು ಐಸ್‌ಕ್ರೀಂ ಪಾರ್ಲರ್‌ಗೆ
ಆಗಮಿಸುವ ಗ್ರಾಹಕರು ಊಟದ ಸವಿರುಚಿ ಅನುಭವಿಸಲು ಅಡ್ಡಿ ಇಲ್ಲ ಎನ್ನುವುದು ಮಾಲೀಕ ಮುಕುಂದ ಕಾಮತ್ ಅಭಿಪ್ರಾಯ.
ಐಸ್‌ಕ್ರೀಂ ಥಾಲಿಯಲ್ಲಿ ಒಟ್ಟು ೧೧ ಬಗೆಗಳಿವೆ. ಬಾಳೆ ಎಲೆಯ ಮಾದರಿಯ ಪ್ಲೇಟಿನಲ್ಲಿ ಐಸ್‌ಕ್ರೀಂ ಥಾಲಿ ಗ್ರಾಹಕರಿಗೆ ಪೂರೈಸಲಾಗುತ್ತದೆ. ಪ್ರತಿ ಐಸ್‌ಕ್ರೀಂ ಕೂಡ ಸೌತ್,
ನಾರ್ತ್ ಊಟದ ಥಾಲಿಯ ಒಂದೊAದು ಮೆನುವನ್ನು ಸಾಂಕೇತಿಕವಾಗಿ ಹೋಲಿಕೆ ಮಾಡಲಾಗಿದೆ. ಇದರಲ್ಲಿ ಸಕ್ಕರೆ(ಉಪ್ಪು ಹೋಲಿಕೆ), ಸ್ಟಾçಬೆರಿ ಹಣ್ಣು(ಉಪ್ಪಿನಕಾಯಿ),
ಒಣ ಹಣ್ಣಿನ ಜೆಲ್ಲೊ(ಕೋಸಂಬರಿ) ನಾಲ್ಕು ಫ್ಲೇವರ್‌ಗಳ ಐಸ್‌ಕ್ರೀಂ(ಬಟರ್ ಸ್ಕೋಚ್, ಸ್ಟಾçಬೆರಿ ಸ್ಪೆಷಲ್, ಅರೇಬಿಯನ್ ಡಿಲೈಟ್, ಬ್ಲಾಕ್ ಕರಂಟ್)ಕ್ರಮವಾಗಿ ಬಗೆ
ಬಗೆಯ ಪದಾರ್ಥ, ವೆನಿಲ್ಲಾ ಐಸ್‌ಕ್ರೀಂ ಸ್ಲಾಬ್, ಗಾಜರ್ ಹಲ್ವಾ(ಅನ್ನ, ಸಾರು), ಫಿಜ್ಜಾ(ಸ್ವೀಟ್) ಮತ್ತು ಮರ್ಜಿ ಪಾನ್(ಪಾನ್ ಬೀಡಾ) ಈ ಐಟಂಗಳನ್ನು ಒಳಗೊಂಡಿದೆ.
ಒAದು ಐಸ್‌ಕ್ರೀಂ ಥಾಲಿಗೆ ಆರ್ಡರ್ ನೀಡಿದರೆ ಇಷ್ಟೆಲ್ಲ ಐಟಂಗಳು ಒಂದೇ ಬಾರಿಗೆ ಸಿಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ಪ್ಲೇಟ್ ಐಸ್‌ಕ್ರೀಂ ಥಾಲಿ ದರ ೨೭೯ ರು. ಮಾತ್ರ. ಐಸ್‌ಕ್ರೀಂ ಥಾಲಿ ತರಿಸಿಕೊಂಡು ಒಬ್ಬರಿಂದ ತೊಡಗಿ ನಾಲ್ಕೆÊದು ಮಂದಿಯೂ ಶೇರ್ ಮಾಡಿಕೊಂಡು
ಸವಿಯಬಹುದು. ಸದ್ಯ ಐಸ್‌ಕ್ರೀಂ ಥಾಲಿ ಮಂಗಳೂರು ಭಾರತ್ ಮಾಲ್‌ನಲ್ಲಿರುವ ಪಬ್ಬಾಸ್ ಐಡಿಯಲ್ ಕೆಫೆಯಲ್ಲಿ ಮಾತ್ರ ಸಿಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು