ಮಂಗಳೂರು ಉತ್ತರ ಮಂಡಲದ ವ್ಯಾಪ್ತಿಯ ನೀರುಮಾರ್ಗ ಮಹಾಶಕ್ತಿ ಕೇಂದ್ರದ ಗ್ರಾಮ ಪಂಚಾಯತ್ ಸದಸ್ಯರ ಅಭ್ಯಾಸ ವರ್ಗದ ಉದ್ಘಾಟನ ಕಾರ್ಯಕ್ರಮ – ಕಹಳೆ ನ್ಯೂಸ್
ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಮಂಗಳೂರು ಉತ್ತರ ಮಂಡಲದ ವ್ಯಾಪ್ತಿಯ ನೀರುಮಾರ್ಗ ಮಹಾಶಕ್ತಿ ಕೇಂದ್ರದ ಪೆಮರ್ಂಕಿ ವಿಶಾಲ್ ಗಾರ್ಡನ್ ಆಡಿಟೋರಿಯಂ ಹಾಲ್‍ನಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡಿದ, ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಅವರು ಭಾರತೀಯ ಜನತಾ ಪಾರ್ಟಿಗೆ ಕಾರ್ಯಕರ್ತರೇ ಜೀವಾಳ. ನಮಗೆ ಪಕ್ಷದ ಕಾರ್ಯಕರ್ತರೇ ಶಕ್ತಿ. ಪಕ್ಷದ ತತ್ವ, ಸಿದ್ಧಾಂತ ದೃಢವಾಗಿರುವುದರಿಂದ ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ಪಕ್ಷ ಬಲಿಷ್ಟವಾಗಿ ಬೆಳೆದುಬಂದಿದೆ. ಜನರ ಸೇವೆಗಾಗಿ ನಮ್ಮ ಪಕ್ಷ, ಸಂಘಟನೆ, ಕಾರ್ಯಕರ್ತರು ಶ್ರಮಿಸುತ್ತಿರುವುದರಿಂದ ಜನರ ವಿಶ್ವಾಸ ನಮ್ಮ ಪಕ್ಷದ ಮೇಲೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಭಾಜಪಾ ಅಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ, ರಾಜೇಶ್ ಕೊಟ್ಟಾರಿ ಮಂಡಲ ಪ್ರಧಾನ ಕಾರ್ಯದರ್ಶಿ, ಸಂತೋμï ತುಪ್ಪೆಕಲ್ಲ್ ಜಿಲ್ಲಾ ಕಾರ್ಯಾಕಾರಿಣಿ ಸದಸ್ಯರು, ಹರಿಕೇನ್ ಶೆಟ್ಟಿ ಉಳಾಯಿಬೆಟ್ಟು ಪಂ.ಅಧ್ಯಕ್ಷರು, ಸಚಿನ್ ಹೆಗ್ಡೆ ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಕಿಶೋರ್ ಶೆಟ್ಟಿ ಸ್ಥಾನೀಯ ಸಮಿತಿ ಅಧ್ಯಕ್ಷ, ದಿನೇಶ್ ತಲ್ಲಿಮಾರ್ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಸಹಿತ ಪಕ್ಷದ ಉತ್ತರ ಮಂಡಲದ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.