ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು 2020-21ರ ಜೆಇಇ ಪ್ರವೇಶ ಪರೀಕ್ಷೆಯ ನಾಟಾ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.
ಪುತ್ತೂರಿನ ದರ್ಭೆ ನಿವಾಸಿಗಳಾದ ನವೀನ್ ಕುಮಾರ್ ಕೆ.ಎಸ್ ಹಾಗೂ ಬೃಂದಾ ಕೆ.ಎಂ ದಂಪತಿ ಪುತ್ರ ವಿಶಾಖ್ ನವೀನ್ ಕೆ 190ನೇ ರಾಂಕ್ ಗಳಿಸಿ, ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಪುತ್ತೂರಿನ ನೆಕ್ಕಿಲಾಡಿ ಸಮೀಪದ ಶಾಂತಿನಗರ ನಿವಾಸಿಗಳಾದ ಲೋಕನಾಥ ಶೆಟ್ಟಿ ಹಾಗೂ ಜಯಶೀಲಾ ಶೆಟ್ಟಿ ದಂಪತಿ ಪುತ್ರ ನಿತೀಶ್ ಶೆಟ್ಟಿ 484ನೇ ರಾಂಕ್ ಗಳಿಸಿದ್ದಾರೆ.
ಪುತ್ತೂರಿನ ಬೆಳ್ಳಿಪ್ಪಾಡಿ ಗ್ರಾಮದ ಕೋಡಿಂಬಾಡಿಯವರಾದ ರಾಜಗೋಪಾಲ ರೈ ಹಾಗೂ ಸುಜಾತಾ ರೈ ದಂಪತಿ ಪುತ್ರ ಶ್ರೀಶ ರೈ 545ನೇ ರಾಂಕ್ ಗಳಿಸಿದ್ದಾರೆ.
ಅಂತೆಯೇ ಸುಳ್ಯದ ಪಂಜ ನಿವಾಸಿಗಳಾದ ದೇವರಾಜ್ ಜಾಕೆ ಮತ್ತು ಪಾರ್ವತಿ ಜಾಕೆ ದಂಪತಿ ಪುತ್ರ ಚಿನ್ಮಯ ಜಾಕೆ 694ನೇ ರಾಂಕ್ ಗಳಿಸಿದ್ದಾರೆ ಹಾಗೂ ಕೊಡಗಿನ ಸೋಮವಾರ ಪೇಟೆಯ ಜಗದೀಶ್ ಬಿ.ಎಂ ಹಾಗೂ ನಂದಿನಿ ಬಿ.ಜೆ ದಂಪತಿ ಪುತ್ರ ಅಂಕಿತ್ ಬಿ ಜೆ 982ನೇ ರಾಂಕ್ ಗಳಿಸಿದ್ದಾರೆ.
ನಾಟಾ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಅಭಿನಂದಿಸಿದ್ದಾರೆ.