
ಕಾಸರಗೋಡು : ಸಮುದ್ರದಲ್ಲಿ ಸ್ನಾನಕ್ಕಿಳಿದ ಪಶ್ಚಿಮ ಬಂಗಾಲ ಮೂಲದ ಯುವಕನೋರ್ವ ನಾಪತ್ತೆಯಾದ ಘಟನೆ ಬೇಕಲದಲ್ಲಿ ನಡೆದಿದೆ. ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ದುಡಿಯುತ್ತಿದ್ದ ಕೋಲ್ಕತ್ತಾ ನಿವಾಸಿ ಶಫೀವುಲ್ ಇಸ್ಲಾಂ (25) ನಾಪತ್ತೆಯಾದ ಯುವಕ. ರವಿವಾರ ಸಂಜೆ ಸಮುದ್ರಕ್ಕೆ ಸ್ನಾನಕ್ಕಿಳಿದ ಸಂದರ್ಭ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರದಲ್ಲಿ ನಾಪತ್ತೆಯಾಗಿದ್ದು, ಪೊಲೀಸರು ಹಾಗೂ ಮೀನುಗಾರರು ಶೋಧ ನಡೆಸಿದರೂ, ಪತ್ತೆಯಾಗಿಲ್ಲ.