Thursday, January 23, 2025
ಬೆಳ್ತಂಗಡಿ

ಹಿಂದೂ ಜಾಗರಣ ವೇದಿಕೆ ಅಂಡಿಂಜೆ ಘಟಕದ ವತಿಯಿಂದ ರಾಮ್ ಪ್ರಸಾದ್ ಮರೋಡಿ ಇವರ ಶ್ರದ್ಧಾಂಜಲಿ ಕಾರ್ಯಕ್ರಮ – ಕಹಳೆ ನ್ಯೂಸ್

ವೇಣೂರು: ಹಿಂದು ಜಾಗರಣ ವೇದಿಕೆ ವೇಣೂರು ತಾಲೂಕು ಇದರ ಅಂಡಿಂಜೆ ಘಟಕದ ವತಿಯಿಂದ ಅಡಿಂಜೆ ಶ್ರೀ ವಿನಾಯಕ ಭಜನ ಮಂದಿರದಲ್ಲಿ ರಾಮ್ ಪ್ರಸಾದ್ ಮರೋಡಿಯವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಮಾಡಲಾಯಿತು.


ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿ ನಾರವಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರು ಮೋಹನ್ ಅಂಡಿಂಜೆ ದಿ.ರಾಮ್ ಪ್ರಸಾದ್ ಮರೋಡಿಯವರ ಬಗ್ಗೆ ಮಾತಾಡಿದರು. ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆ ಪುತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ , ಹಿಂದೂ ಜಾಗರಣ ವೇದಿಕೆ ನ್ಯಾಯ ಜಾಗರಣ ಪ್ರಮುಖ್ ರಾಜೇಶ್ ಬೊಳ್ಳುಕಲ್ಲು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಹಿಂದು ಯುವ ವಾಹಿನಿ ಸಯೋಜಕ್ ಪ್ರಶಾಂತ್ ಬಂಟ್ವಾಳ, ವೇಣೂರು ತಾಲ್ಲೂಕು ಉಪಾಧ್ಯಕ್ಷರಾದ ನಿರಂಜನ್ ಹಾಗೂ ಅಂಡಿಂಜೆ ಘಟಕದ ಅಧ್ಯಕ್ಷರು ಜಯಂತ್, ಹಿಂದೂ ಜಾಗರಣ ವೇದಿಕೆ ವೇಣೂರು ತಾಲೂಕಿನ ಪ್ರದಾನ ಕಾರ್ಯದರ್ಶಿ ರಕ್ಷಿತ್ ಸಾವ್ಯ, ಕಾರ್ಯದರ್ಶಿ ಜಗದೀಶ್ ಹೆಗ್ಡೆ, ಕಾರ್ಯದರ್ಶಿ ಉದಯ್ ಅಂಡಿಂಜೆ, ಸಂಪರ್ಕ ಪ್ರಮುಖ್ ಪ್ರಸಾದ್ ನಿಟ್ಟಡೆ, ಸಂಘದ ಪ್ರಮುಖರಾದ ರಾಜಶೇಖರ್ ಅಂಡಿಂಜೆ, ಕರುಣಾಕರ, ಪೂರ್ಣೆಶ್, ಹಿಂದೂ ಜಾಗರಣ ವೇದಿಕೆ ಅಂಡಿಂಜೆ ಘಟಕದ ಪ್ರಮುಖರು ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹಿಂದೂ ಜಾಗರಣ ವೇದಿಕೆ ವೇಣೂರು ತಾಲೂಕಿನ ಪ್ರದಾನ ಕಾರ್ಯದರ್ಶಿ ರಕ್ಷಿತ್ ಸಾವ್ಯ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು