Thursday, January 23, 2025
ಪುತ್ತೂರು

ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಭಗವದ್ಗೀತಾ ಪಠಣ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತಾ ಪಠಣ ಅಭ್ಯಾಸ ಮಾಡಿಸುತ್ತಾ ಭಗವದ್ಗೀತೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದ ಖ್ಯಾತ ವಾಗ್ಮಿ ಹಾಗೂ ಚಿಂತಕ ಶ್ರೀಕೃಷ್ಣ ಉಪಾಧ್ಯಾಯರು ಅಂಜಿಕೆ ಇಲ್ಲದೆ ಭಗವದ್ಗೀತೆಯನ್ನು ಸ್ಪಷ್ಟವಾಗಿ ಗಟ್ಟಿಯಾಗಿ ವ್ಯಾಕರಣ ಬದ್ಧವಾಗಿ ಪಠಿಸಬೇಕು. ನಾವೂ ಸಂತೋಷಪಡುತ್ತಾ ಇನ್ನೊಬ್ಬರಿಗೂ ಆನಂದವೀಯುತ್ತಾ, ನಮ್ಮ ನಗು ಇನ್ನೊಬ್ಬರಿಗೆ ನೋವು ಕೊಡದಂತೆ ಬಾಳಬೇಕು. ಈ ಸಂಸ್ಕಾರಗಳನ್ನೆಲ್ಲಾ ಅಳವಡಿಸಿಕೊಂಡು ಭಗವದ್ಗೀತೆಯನ್ನು ಪಠಿಸಬೇಕು. ಇದರಿಂದ ಸುಸಂಸ್ಕೃತರಾಗುತ್ತೇವೆ. ಅಕ್ಷರಗಳ ಗಮನದ ಜೊತೆಗೆ ಭಗವಾನ್ ಶ್ರೀಕೃಷ್ಣನ ನೆನಪಲ್ಲಿ ಭಗವದ್ಗೀತೆಯನ್ನು ಹೇಳಿದಾಗ ಅದೊಂದು ಪೂಜೆಯಾಗುವುದು. ಆಗ ಮಾತ್ರ ಭಗವದ್ಗೀತೆ ಜೀವಪಡೆದುಕೊಳ್ಳುತ್ತದೆ. ಈ ರೀತಿ ಭಗವದ್ಗೀತಾ ಪಠಣ ಅಭ್ಯಾಸ ಮಾಡಿ ಎಂದು ಹೇಳಿದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಹಿಂದಿ ಉಪನ್ಯಾಸಕಿ ಪುಷ್ಪಲತಾ, ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ ಕನ್ನಡ ಉಪನ್ಯಾಸಕಿ ಜಯಂತಿ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ಜಯಂತ್ ಸಹಕರಿಸಿದರು.