ಮಂಗಳೂರು, ಮೇ 11: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 12ರಂದು ಮತದಾನ ನಡೆಯಲಿದ್ದು, ಈ ಹಿನ್ನೆಲೆ ಮತದಾರರಿಗೆ ಉಚಿತವಾಗಿ ಕೆಎಸ್ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂಥ್ ಸೆಂಥಿಲ್ ಈ ಕುರಿತು ಮಾಹಿತಿ ನೀಡಿದ್ದು, ಮೇ 12 ರಂದು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಎಸ್ಆರ್‌ಟಿಸಿ ದಕ್ಷಿಣ ಕನ್ನಡದಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ‘ಎಲೆಕ್ಷನ್ ಸ್ಪೆಷಲ್’ ಎಂಬ ಹೆಸರಿನ ನಾಮಫಲಕವನ್ನು ಈ ಬಸ್ಸುಗಳು ಹೊಂದಿರುತ್ತವೆ. ಸುಳ್ಯ, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕುಗಳಲ್ಲಿ ಹೆಚ್ಚುವರಿ ಬಸ್ಸುಗಳು ಸಂಚಾರ ನಡೆಸಲಿವೆ. ಬಸ್ಸುಗಳ ಸಂಚಾರ ಕಡಿಮೆ ಇರುವ ಪ್ರದೇಶದಲ್ಲಿ ಒಟ್ಟು 160 ಕೆಎಸ್ಆರ್‌ಟಿಸಿಯ ಬಸ್ಸುಗಳು ಸಂಚಾರ ನಡೆಸಲಿವೆ. ಮೇ. 12ರ ಮತದಾನದ ದಿನ ಬೆಳಗ್ಗೆಯಿಂದ ಸಂಜೆ ತನಕ ಈ ಬಸ್ಸುಗಳು ಮೂರು ಟ್ರಿಪ್‌ಗಳಲ್ಲಿ ಸಂಚಾರವನ್ನು ನಡೆಸಲಿವೆ.
ಮತದಾನ ಮಾಡಲು ಆಗಮಿಸುವ ಜನರು ‘ಎಲೆಕ್ಷನ್ ಸ್ಪೆಷಲ್’ ಎಂಬ ಹೆಸರಿನ ನಾಮಫಲಕ ಹೊಂದಿರುವ ಸರ್ಕಾರಿ ಬಸ್ಸುಗಳ್ಲಲಿ ವೋಟರ್ ಐಡಿ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ