Thursday, January 23, 2025
ಪುತ್ತೂರು

ಶೋಚನೀಯ ಸ್ಥಿತಿಯಲ್ಲಿದ್ದ ಮನೆಗೆ ಉದ್ಯಮಿ, ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಭೇಟಿ: ಮನೆಯನ್ನು ದುರಸ್ಥಿ ಮಾಡಿ ಕೊಡುವ ಭರವಸೆ-ಕಹಳೆ ನ್ಯೂಸ್

ಪುತ್ತೂರು: ಬನ್ನೂರು ನಗರ ಸಭೆ ವ್ಯಾಪ್ತಿಯ ಗುರುಂಪುನಾರ್ ರೆಂಜಾಳ ನಿವಾಸಿ ಹರಿಶ್ಚಂದ್ರ ಆಚಾರ್ಯರ ಮನೆಯ ಮೇಲ್ಚಾವಣಿ ಎರಡು ತಿಂಗಳ ಹಿಂದೆ ಮುರಿದು ಬಿದ್ದು ಮಳೆಯ ನೀರು ಮನೆಯೊಳಗೆ ಸೋರುತ್ತಿತ್ತು, ಮನೆಯಲ್ಲಿ ರಾತ್ರಿ ವೇಳೆ ಮಲಗಲು ಸಾದ್ಯವಾಗದ ಪರಿಸ್ಥಿತಿ ರಾತ್ರಿ ಹೊತ್ತು ಮನೆಯ ಹೊರಗಡೆ ಮಲಗುತ್ತಿದ್ದರು. ಅಂಗ ವೈಕಲ್ಯತೆ ಹೊಂದಿದ್ದು ಹರಿಶ್ಚಂದ್ರ ಆಚಾರ್ಯರು ಯಾವ ಕೆಲಸವನ್ನು ಮಾಡಲು ಸಾದ್ಯವಾಗದೆ ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ. ಇಂತಹ ಶೋಚನೀಯ ಸ್ಥಿತಿಯಲ್ಲಿರುವ ಇವರ ಮನೆಗೆ ಉದ್ಯಮಿ, ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಖುದ್ದು ಭೇಟಿ ನೀಡಿ. ಅವರ ಪರಿಸ್ಥಿತಿಯನ್ನು ನೋಡಿ ಮನೆಯ ಮೇಲ್ಚಾವಣಿಗೆ ಸಿಮೆಂಟ್ ಶೀಟ್ ಹಾಕಿ ರಿಪೇರಿ ಮಾಡಿ ಕೊಡುವ ಭರವಸೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು