Recent Posts

Sunday, January 19, 2025
ಪುತ್ತೂರು

ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ದೇವಾಲಯಕ್ಕೆ ಮನವಿ-ಕಹಳೆ ನ್ಯೂಸ್

ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ವಸ್ತ್ರಗಳನ್ನು ಧರಿಸಿಕೊಂಡು ದೇವಾಲಯವನ್ನು ಪ್ರವೇಶಿಸುತ್ತಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿದೆ ಆದ್ದರಿಂದ ಶೀಘ್ರವೇ ದೇವಾಲಯದ ಆಡಳಿತ ಮಂಡಳಿಯು ಹಿಂದೂ ಸಂಪ್ರದಾಯಿಕ ಉಡುಗೆಯನ್ನು ತೊಟ್ಟು ದೇವಸ್ಥಾನ ಪ್ರವೇಶಿಸಬೇಕಾಗಿ ಭಕ್ತಾದಿಗಳಿಗೆ ಸೂಚನೆಯನ್ನು ನೀಡಬೇಕಾಗಿ ಹಾಗೂ ಪಾಶ್ಚಿಮಾತ್ಯ ಶೈಲಿಯ ಮತ್ತು ದೇಹದ ಅಂಗಾಂಗಗಳನ್ನು ಪ್ರದರ್ಶಿಸುವ ವಿಕೃತ ವಸ್ತ್ರವನ್ನು ಧರಿಸಿ ಬರುವವರನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ದೇವಸ್ಥಾನದ ವ್ಯವಸ್ಥಾಪಕರಾದ ಹರೀಶ್ ಶೆಟ್ಟಿ ಅವರ ಮೂಲಕ ವ್ಯವಸ್ಥಾಪನ ಸಮಿತಿ ಹಾಗೂ ದೇವಾಲಯದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ. ಕೃಷ್ಣ ಪ್ರಸನ್ನ,ಜಿಲ್ಲಾ ಕೋಶಾಧಿಕಾರಿ ನ್ಯಾಯಾವಾಧಿ ಮಾಧವ ಪೂಜಾರಿ,ಪುತ್ತೂರು ಪ್ರಖಂಡ ಉಪಾಧ್ಯಕ್ಷರಾದ ಸೇಸಪ್ಪ ಬೆಳ್ಳಿಪ್ಪಾಡಿ, ಜಿಲ್ಲಾ ಸಾಪ್ತಾಹಿಕ್ ಮಿಲನ್ ಜಿತೇಶ್ ಬಲ್ನಾಡು
ಪುತ್ತೂರು ಪ್ರಖಂಡ ಬಜರಂಗದಳ ಸಂಚಾಲಕ ಹರೀಶ್ ಕುಮಾರ್ ದೊಳ್ಪಾಡಿ,ಪ್ರಖಂಡ ಸಹ ಸಂಚಾಲಕ ಪ್ರವೀಣ್ ಕಲ್ಲೆಗ,ವಿಶ್ವ ಹಿಂದೂ ಪರಿಷತ್ ನಗರ ಉಪಾಧ್ಯಕ್ಷ ಜಗದೀಶ್ ಬನ್ನೂರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು