Recent Posts

Sunday, January 19, 2025
ಸುದ್ದಿ

ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಮತ್ತೆ ಏರಿಕೆ- ಕಹಳೆ ನ್ಯೂಸ್

ನವದೆಹಲಿ : ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರ ಮತ್ತೆ ಏರಿಕೆಯಾಗಿದ್ದು, ಎಲ್‍ಪಿಜಿ ದರ ರೂ. 15ರಷ್ಟು ಹೆಚ್ಚಳ ಮಾಡುವ ಮೂಲಕ ಪ್ರತಿ ಸಿಲಿಂಡರ್ ಬೆಲೆ ರೂ. 900 ಸಮೀಪಿಸಿದೆ. ಕೇವಲ ಎರಡು ತಿಂಗಳಲ್ಲಿ ಸತತ ನಾಲ್ಕನೇ ಬಾರಿಗೆ ದರ ಹೆಚ್ಚಳವಾಗಿದೆ.

ಹೊಸ ಏರಿಕೆಯ ನಂತರ, ಈಗ ದೆಹಲಿಯಲ್ಲಿ ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆ ಪ್ರತಿ ಸಿಲಿಂಡರ್‍ಗೆ ರೂ 884.50 ರಿಂದ ರೂ 899.50 ಕ್ಕೆ ಏರಿಕೆಯಾಗಿದೆ. 5 ಕೆಜಿ ಎಲ್‍ಪಿಜಿ ಸಿಲಿಂಡರ್‍ಗೆ ₹502 ಆಗಿದ್ದು, ಇವತ್ತಿನಿಂದಲೇ ಹೊಸ ದರ ಅನ್ವಯವಾಗಿದೆ. ಇಂಧನ ದರ ಏರಿಕೆಯಾದ ಬೆನ್ನಲ್ಲೇ ಅನಿಲ ದರದಲ್ಲೂ ಹೆಚ್ಚಳವಾಗಿದೆ
ದೇಶಾದ್ಯಂತ ಇಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದ್ದು, ದಾಖಲೆ ಮಟ್ಟಕ್ಕೆ ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 102.39 ರೂಪಾಯಿ ಮತ್ತು ಡೀಸೆಲ್ 90.77 ರೂಪಾಯಿ ತಲುಪಿತ್ತು. ಇಂದು ಮತ್ತೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು