Recent Posts

Monday, January 20, 2025
ಪುತ್ತೂರು

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಹಿಂದೂ ಜಾಗರಣ ವೇದಿಕೆ ಉಪ್ಪಿನಂಗಡಿ ಘಟಕ ವತಿಯಿಂದ ದೇವಾಲಯಕ್ಕೆ ಮನವಿ- ಕಹಳೆ ನ್ಯೂಸ್ 

ಉಪ್ಪಿನಂಗಡಿ : ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ವಸ್ತ್ರಗಳನ್ನು ಧರಿಸಿಕೊಂಡು ದೇವಾಲಯವನ್ನು ಪ್ರವೇಶಿಸುತ್ತಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿದೆ ಆದ್ದರಿಂದ ಶೀಘ್ರವೇ ದೇವಾಲಯದ ಆಡಳಿತ ಮಂಡಳಿಯು ಹಿಂದೂ ಸಂಪ್ರದಾಯಿಕ ಉಡುಗೆಯನ್ನು ತೊಟ್ಟು ದೇವಸ್ಥಾನ ಪ್ರವೇಶಿಸಬೇಕಾಗಿ ಭಕ್ತಾದಿಗಳಿಗೆ ಸೂಚನೆಯನ್ನು ನೀಡಬೇಕಾಗಿ ಹಾಗೂ ಪಾಶ್ಚಿಮಾತ್ಯ ಶೈಲಿಯ ಮತ್ತು ದೇಹದ ಅಂಗಾಂಗಗಳನ್ನು ಪ್ರದರ್ಶಿಸುವ ವಿಕೃತ ವಸ್ತ್ರವನ್ನು ಧರಿಸಿ ಬರುವವರನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಉಪ್ಪಿನಂಗಡಿ ಘಟಕ ವತಿಯಿಂದ ವ್ಯವಸ್ಥಾಪನ ಸಮಿತಿ
ಅಧ್ಯಕ್ಷರಾದ ಕರುಣಾಕರ ರೈ ಹಾಗೂ ದೇವಾಲಯದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನರಸಿಂಹ ಮಾಣಿ, ಸಂದೀಪ್ ಕುಪ್ಪೆಟ್ಟಿ, ರಂಜಿತ್ ಅಡೆಕಲ್ಲ್, ಚೇತನ್ ಬೊಲ್ಲರ್, ಚಿದಾನಂದ ಪಂಚೆರ್, ಧನ್ಯರಾಜ್ ಬೊಲ್ಲರ್, ರಾಧ ಕೆಮ್ಮರ  ಉಪಸ್ಥಿತರಿದ್ದರು. 

ಜಾಹೀರಾತು

ಜಾಹೀರಾತು
ಜಾಹೀರಾತು