Recent Posts

Monday, January 20, 2025
ಬಂಟ್ವಾಳ

ಮಹತೋಭಾರ ಕಾರಿ0ಜೇಶ್ವರ ದೇವಸ್ಥಾನದಲ್ಲಿ ವಸ್ತ್ರಸಂಹಿತೆಯ ಬ್ಯಾನರ್ ಅಳವಡಿಕೆ- ಕಹಳೆ ನ್ಯೂಸ್

ಬಂಟ್ವಾಳ: ಮಹತೋಭಾರ ಕಾರಿ0ಜೇಶ್ವರ ದೇವಸ್ಥಾನದಲ್ಲ್ಲಿ ವಸ್ತ್ರ ಸಂಹಿತೆ ಕಡ್ಡಾಯ ಅಂತಾ ಬ್ಯಾನರ್ ಹಾಕಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಯಾಗಬೇಕೆಂದು ಇತ್ತೀಚೆಗೆ ಹೆಚ್ಚಾಗಿ ಆಗ್ರಹಗಳು ಕೇಳಿ ಬರ್ತಾ ಇದ್ದು, ಹಲವು ಪ್ರಮುಖ ದೇವಾಸ್ಥಾನಗಳಲ್ಲಿ ಈಗಾಗ್ಲೆ ಹಿಂದೂ ಪರ ಸಂಘಟನೆಗಳು ಭಕ್ತರಿಗೆ ವಸ್ತ್ರ ಸಂಹಿತೆ ಕಡ್ಡಾಯ ಅಂತಾ ಬೋರ್ಡ್ ಕೂಡ ಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ಮಹತೋಭಾರ ಕಾರಿ0ಜೇಶ್ವರ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ವಸ್ತ್ರಸಂಹಿತೆ ಜಾರಿಗೊಳಿಸಲು ಮನವಿ ನೀಡಿ ನಾಮಫಲಕ ಅಳವಡಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ಜಿಲ್ಲಾ ಸಹಸಂಚಾಲಕ ಗುರುರಾಜ್ ಬಂಟ್ವಾಳ, ಸಂತೋಷ್ ಸರಪಾಡಿ, ಪ್ರಶಾದ್ ಬೆಂಜನಪದವು, ಪ್ರವೀಣ್ ಕುಂಟಾಲಪಲ್ಕೆ, ಲೋಹಿತ್ ಕಾವಲಕಟ್ಟೆ, ಸತೀಶ್ ಮಧ್ವ, ವಿನೀತ್ ಪೆರಿಯಾರ್ ದೋಟ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು