ಪುತ್ತೂರು : ಇತ್ತೀಚೆಗೆ ಕೋಳಿ ಪದಾರ್ಥ ತಿಂದು ಓರ್ವ ಮೃತಟ್ಟು ಹಲವರು ಅಸ್ವಸ್ಥಗೊಂಡ ಘಟನೆ ಮಾಸುವ ಮುನ್ನವೇ,ಪುತ್ತೂರು ತಾಲೂಕಿನ ಪಡೂರು ಎಂಬಲ್ಲಿ ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ 12 ಮಂದಿ ಅಸ್ವಸ್ಥಗೊಂಡ ಘಟನೆ ಇಂದು ನಡೆದಿದ್ದು, ಅಸ್ವಸ್ಥರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿ ಇಂದು ಮಧ್ಯಾಹ್ನ ಊಟದ ಜೊತೆಗೆ ಅಣಬೆ ಪದಾರ್ಥ ಮಾಡಿದ್ದು, ಎಲ್ಲರೂ ಅಣಬೆ ಪದಾರ್ಥ ಸೇವಿಸಿದ್ದರು. ಕೆಲ ಹೊತ್ತಿನಲ್ಲೇ ಹಲವರು ಅಸ್ವಸ್ಥಗೊಂಡಿದ್ದು, ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಅಸ್ವಸ್ಥಗೊಂಡವರನ್ನು ರಾಘವ(42), ಲತಾ(35), ತ್ರಿಶಾ(10), ಕೇಶವ(45), ಅರ್ಚನಾ(10), ಹೊನ್ನಮ್ಮ(60), ಬೇಬಿ(35) ಎನ್ನಲಾಗಿದ್ದು, ಹಾಗೂ ಇತರರ ಮಾಹಿತಿ ನಿರೀಕ್ಷಿಸಲಾಗಿದೆ.
You Might Also Like
ನೀರು, ಭೂಮಿ, ಗಾಳಿ, ಆಕಾಶ ಮತ್ತು ಬೆಂಕಿ ಇದು ಪಂಚಭೂತಗಳು-ಕಿಶೋರ್ ಕುಮಾರ್ ಬೊಟ್ಯಾಡಿ-ಕಹಳೆ ನ್ಯೂಸ್
ಪುತ್ತೂರು: . ಆಕಾಶದಿಂದ ತೊಡಗಿ ಸ್ಥೂಲಗೊಳ್ಳುತ್ತಾ ಪೃಥ್ವಿಯವರೆಗೆ ಪಂಚಭೂತಗಳು ವಿಸ್ತರಿಸಿವೆ. ಜೀವಿಗಳ ಶರೀರಗಳೂ ಇದರಿಂದ ನಿರ್ಮಿತವಾಗಿವೆ. ಇವು ಸಹಕರಿಸದಿದ್ದರೆ ನಾವೆಷ್ಟು ಹೋರಾಡಿದರೂ ಏನನ್ನೂ ಸಾಧಿಸಲಾಗದು ಎಂದು ಕರ್ನಾಟಕ...
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ವಾಣಿಜ್ಯ ಸಂಘದ ಚಟುವಟಿಕೆಗಳ ಉದ್ಘಾಟನೆ-ಕಹಳೆ ನ್ಯೂಸ್
ಪುತ್ತೂರು: ವಿದ್ಯಾರ್ಥಿ ಜೀವನ ಬಂಗಾರವಾಗಲು ವಿದ್ಯಾರ್ಥಿಯಾಗಿ ಕಠಿಣ ಪರಿಶ್ರಮ ಅಗತ್ಯ. ವೈಫಲ್ಯಗಳು ಯಶಸ್ಸಿನ ಭಾಗವೇ ಆಗಿರುವುದರಿಂದ ವೈಫಲ್ಯಗಳಿಗೆ ಸಿದ್ಧರಾಗಿರಿ ಮತ್ತು ಅದು ಯಶಸ್ಸನ್ನು ಸಾಧಿಸಲು ಸಹಕಾರಿ ಎಂದು...
ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿAಗ್ ಎಂಡ್ ಟೆಕ್ನಾಲಜಿಯ ಮಹಿಳೆಯರ ಕಬಡ್ಡಿ ತಂಡವು ರಾಜ್ಯಮಟ್ಟದ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ-ಕಹಳೆ ನ್ಯೂಸ್
ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿAಗ್ ಎಂಡ್ ಟೆಕ್ನಾಲಜಿಯ ಮಹಿಳೆಯರ ಕಬಡ್ಡಿ ತಂಡವು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿಕೊಂಡಿದೆ....
ಕಾರ್ಕಳ ಜ್ಞಾನಸುಧಾದ ಇಬ್ಬರು ಮೈಸೂರು ವಿಭಾಗೀಯ ಮಟ್ಟಕ್ಕೆ-ಕಹಳೆ ನ್ಯೂಸ್
ಉಡುಪಿ : ರಾಜ್ಯ ಕ್ಷೇಮಾಭಿವೃದ್ಧಿ ಮತ್ತು ಶಿಕ್ಷಣ ಇಲಾಖೆ ವತಿಯಿಂದ ನ.21ರಂದು ನಡೆದ 2024-25ನೇ ಸಾಲಿನ ಉಡುಪಿ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ ಇಂಗ್ಲಿಷ್ ಪ್ರಬAಧದಲ್ಲಿ ಕಾರ್ಕಳ ಜ್ಞಾನಸುಧಾ...