Sunday, January 19, 2025
ಭಟ್ಕಳ

ಭಟ್ಕಳದಲ್ಲಿ ಮನೆ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ: ಓರ್ವ ಆರೋಪಿ ಅರೆಸ್ಟ್-ಕಹಳೆ ನ್ಯೂಸ್

ಭಟ್ಕಳ: ಭಟ್ಕಳ ತಾಲೂಕಿನ ತಗ್ಗರಗೋಡದಲ್ಲಿ ಮನೆ ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೇಡುಕುಳಿ ಹೊಂಡ ನಿವಾಸಿ ಖಾಜಾ ಅಬ್ದುಲ್ ಸತ್ತಾರ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಆರೋಪಿ ಭಟ್ಕಳ ತಾಲೂಕಿನ ತಗ್ಗರಗೋಡದ ಬಿಬಿ ಫಾತಿಮಾ ಅಬ್ದುಲ್ ರಜಾಕ್ ಶೇಖ್ ಎಂಬವರ ಮನೆ ಬಾಗಿಲು ಒಡೆದು 3 ಕಿ.ವಿ ಓಲೆ, 2 ಉಂಗುರ, 1 ನೆಕ್ಲೆಸ್, ಬಂಗಾರದ ಬಳೆ, ಮೊಬೈಲ್ ಸೇರಿದಂತೆ ಒಟ್ಟು 5 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಭಟ್ಕಳ ನಗರ ಠಾಣೆ ಪೊಲೀಸರು, ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು