Recent Posts

Monday, April 14, 2025
ರಾಜಕೀಯ

ಮದುವೆಗೂ ಮುನ್ನ ಮತದಾನ ಮಾಡಿ ಮಾದರಿಯಾದ ವಧು

ಮಂಗಳೂರು: ಮತದಾನಕ್ಕೆ ಅನುಕೂಲವಾಗಲಿ ಎಂದು ರಜೆ ಘೋಷಿಸಿದರೂ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವುದೆಂದರೆ ಅದೆಷ್ಟೋ ಮಂದಿಗೆ ಅಲರ್ಜಿ. ಅಂತಹವರು ಈಕೆಯನ್ನು ನೋಡಿ ಕಲಿಯಬೇಕು. ತನ್ನ ಬಾಳಿನ ಪ್ರಮುಖ ಘಟ್ಟ ಮದುವೆಯ ದಿನವೂ ಈಕೆ ಮತದಾನ ಮಾಡಿ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾಳೆ. ಈ ಮೂಲಕ ಮದುವೆಗಿಂತ ಮತದಾನವೇ ಶ್ರೇಷ್ಠ ಎಂಬುದನ್ನು ಮಧುಮಗಳು ತೋರಿಸಿಕೊಟ್ಟಿದ್ದಾರೆ.

ಇವರ ಹೆಸರುವಿಯೋಲಾ ಮಾರಿಯಾ. ಇಂದು ಈಕೆಯ ವಿವಾಹ ಸಮಾರಂಭ ನಡೆಯುತ್ತಿದೆ. ನವ ಬಾಳಿನ ಹೊಸ್ತಿಲಲ್ಲಿರುವ ಈ ವಧುವಿಗೆ ಪ್ರಜಾಪ್ರಭುತ್ವದ ಜಾತ್ರೆಯೇ ಮುಖ್ಯ ಎಂದುಕೊಂಡ ಈಕೆ ಇಂದು ಬೆಳಗ್ಗೆಯೇ ಮತಚಲಾಯಿಸಿದ್ದಾರೆ. ಉಂಗುರ ಬದಲಾಯಿಸುವ ಮುನ್ನ ಬೋಂದೆಲ್ ಸೇಂಟ್ ಲಾರೆನ್ಸ್ ಮೀಡಿಯಂ ಶಾಲೆಯಲ್ಲಿರುವ ಮತದಾನ ಕೇಂದ್ರಕ್ಕೆ ತೆರಳಿ ತಮ್ಮ ಹಕ್ಕು ಚಲಾಯಿಸಿ ಮಾದರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ