Wednesday, January 22, 2025
ಬಂಟ್ವಾಳ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಸಂಚಯಗಿರಿಯಲ್ಲಿ ಅಪರಿಚಿತ ಶವ ಪತ್ತೆ – ಕಹಳೆ ನ್ಯೂಸ್

ಬಂಟ್ವಾಳ : ಪುರಸಭಾ ವ್ಯಾಪ್ತಿಯ ಸಂಚಯಗಿರಿ ಎಂಬಲ್ಲಿ 86ರ ಹರೆಯದ ಅಪರಿಚಿತ ಶವವೊಂದು ಗುರುವಾರ ಪತ್ತೆಯಾಗಿದೆ. ಮೃತರು ಕಳೆದ 15 ವರ್ಷಗಳಿಂದ ಸಂಚಯಗಿರಿ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದು, ಕನ್ನಡ, ಇಂಗ್ಲೀಷ್, ತಮಿಳು, ಮಲಯಾಳಿ ಭಾಷೆ  ಮಾತನಾಡುತ್ತಿದ್ದರು. ಮೃತ ದೇಹವನ್ನು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ. ಮೃತರ ಬಗ್ಗೆ ಮಾಹಿತಿ ತಿಳಿದವರು ಅಥವಾ ವಾರೀಸುದಾರರು ನಗರ ಠಾಣೆ ಪೊಲೀಸರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು