Tuesday, January 21, 2025
ಪುತ್ತೂರು

ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಿಂದವಿ ಶಾಖೆ ವತಿಯಿಂದ ಅ.10ರಂದು ಬಲ್ನಾಡು ವಿನಾಯಕ ವೃತ್ತದ ಮಾರ್ಗಸೂಚಿ ದ್ವಜಕಟ್ಟೆಯ ಉದ್ಘಾಟನೆ ಮತ್ತು ಶಸ್ತ್ರ ಪೂಜೆ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಿಂದವಿ ಶಾಖೆ, ಬಲ್ನಾಡು ಇವರ ವತಿಯಿಂದ ವಿನಾಯಕ ವೃತ್ತದ ಬಲ್ನಾಡು ಮಾರ್ಗಸೂಚಿ ಇರುವ ದ್ವಜಕಟ್ಟೆಯ ಉದ್ಘಾಟನೆ ಮತ್ತು ಶಸ್ತ್ರ ಪೂಜೆ ಕಾರ್ಯಕ್ರಮ ಅ.10ರಂದು ಬೆಳ್ಳಿಗ್ಗೆ 9 ಗಂಟೆಗೆ ವಿನಾಯಕನಗರ ಬಲ್ನಾಡಿನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾಗಿರುವ ತಿಮ್ಮಪ್ಪ ಶೆಟ್ಟಿ ಚನಿಲ ಅವರು ನೇರವೇರಿಸಲಿದ್ದಾರೆ. ಉಳಿದಂತೆ ಮುಖ್ಯ ಅತಿಥಿಗಳಾಗಿ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕರಾದ ಮುರಳಿಕೃಷ್ಣ ಹಸಂತಡ್ಕ, ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಮ್ಡೇಳು, ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡದ ಅಧ್ಯಕ್ಷ ಜನಾರ್ದನ ಬೆಟ್ಟ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾಧವ ಗೌಡ ಕಾಂತಿಲ, ವಿಶ್ವ ಹಿಂದೂ ಪರಿಷತ್ ಹಿಂದವಿ ಬಲ್ನಾಡು ಶಾಖೆಯ ಅಧ್ಯಕ್ಷ ಗಿರೀಶ್ ಪದವು, ವಿನಾಯಕ ಚಾರಿಟೇಬಲ್ ಟ್ರಸ್ಟ್ (ರಿ)ನ ಅಧ್ಯಕ್ಷ ಶರತ್ ಮುದಲಾಜೆ ಭಾಗವಹಿಸಲಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು