Tuesday, January 21, 2025
ಬೆಂಗಳೂರು

ಬೆಂಗಳೂರಿನಲ್ಲಿ ಮತ್ತೆ ಕುಸಿದ 5 ಅಂತಸ್ತಿನ ಕಟ್ಟಡ : 15ಜನರ ಪ್ರಾಣ ಉಳಿಸಿದ ಸೆಕ್ಯೂರಿರ್ಟಿಗಾರ್ಡ್- ಕಹಳೆ ನ್ಯೂಸ್

ಬೆಂಗಳೂರು: ಕಸ್ತೂರಿನಗರದಲ್ಲಿನ 5 ಅಂತಸ್ತಿನ ಕಟ್ಟಡ ಕುಸಿತಗೊಂಡಿದ್ದು, ಕಟ್ಟಡದಲ್ಲಿ ವಾಸಿಸುತ್ತಿದ್ದಂತ 15 ಜನರು ಪಾರಾಗಿದ್ದಾರೆ. ಬಿರುಕು ಬಿಟ್ಟಿದ್ದಂತ ಪಿಲ್ಲರ್ ನಿಂದಾಗಿ ಕುಸಿತಗೊಂಡ ಕಟ್ಟಡದಲ್ಲಿ ವಾಸಿಸುತ್ತಿದ್ದ 15 ಜನರು ಪಾರಾಗುವುದಕ್ಕೆ ಕಾರಣವಾಗಿದ್ದೇ ಅದೇ ಕಟ್ಟಡದ ಕಾವಲುಗಾರ.

ಹೌದು.. ಬೆಂಗಳೂರಿನ ಕಸ್ತೂರಿ ನಗರದಲ್ಲಿನ 5 ಅಂತಸ್ಥಿನ ಕಟ್ಟಡ ಕುಸಿತಗೊಂಡರು, ಮನೆಯಲ್ಲಿದ್ದಂತವರನ್ನು ಉಳಿಸಿದ್ದೇ ಸೆಕ್ಯೂರಿಟಿ ಗಾರ್ಡ್ ಆಗಿದ್ದಾರೆ. ಕಟ್ಟಡದ ಬಲ ಭಾಗದ ಪಿಲ್ಲರ್ ಕೆಳಗೆ ಕುಸಿಯುತ್ತಿದ್ದಂತೆ, ಪ್ರತಿ ಮನೆ ಮನೆಗೂ ಓಡಿ ಹೋದಂತ ಕಾವಲುಗಾರ, ಪಿಲ್ಲರ್ ಕುಸಿದಿದೆ. ಮನೆ ಬೀಳುವ ಸ್ಥಿತಿಯಲ್ಲಿದೆ. ಹೊರಗೆ ಓಡಿ ಬನ್ನಿ ಎಂದು ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾರಾದರೂ ಲಿಫ್ಟ್‍ನಲ್ಲಿ ಬಂದು ಅದರಲ್ಲಿ ಸಿಲುಕಿ ಸಾವನ್ನಪ್ಪಬಹುದು ಎಂಬುದಾಗಿಯೂ ಯೋಚಿಸಿದಂತ ಸೆಕ್ಯೂರಿಟಿ ಗಾರ್ಡ್, ಲಿಫ್ಟ್ ಕೂಡ ಆಫ್ ಮಾಡಿದ್ದಾರೆ. ಎಲ್ಲಾ ಬಾಡಿಗೆದಾರರನ್ನು ಮೆಟ್ಟಿಲುಗಳ ಮೂಲಕ ಕೂಡಲೇ ಕೆಳಗೆ ಇಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಷ್ಟೇ ಅಲ್ಲದೇ ತಕ್ಷಣವೇ ಮನೆ ಮಾಲೀಕನಿಗೂ ತಿಳಿಸಿದ್ದಾರೆ. ಹೀಗೆ ರಾಮಮೂರ್ತಿ ನಗರದ ಕಸ್ತೂರಿ ನಗರದಲ್ಲಿನ 5ಅಂತಸ್ತಿನ ಕಟ್ಟಡ ಕುಸಿತಗೊಂಡರೂ, 15 ಜನರು ಮಾತ್ರ ಸೆಕ್ಯೂರಿಟಿ ಗಾರ್ಡ್ ಸಮಯ ಪ್ರಜ್ಞೆಯಿಂದ ಬದುಕುಳಿದಿದ್ದಾರೆ.