Tuesday, January 21, 2025
ಬಂಟ್ವಾಳ

ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ 146 ಫಲಾನುಭವಿಗಳಿಗೆ ಚೆಕ್ ವಿತರಣೆ : ಬಿ.ಸಿ.ರೋಡಿನ ಶಾಸಕರ ಕಚೇರಿಯಲ್ಲಿ ಚೆಕ್ ವಿತರಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್- ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ಕ್ಷೇತ್ರದಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ 146 ಫಲಾನುಭವಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಿ.ಸಿ.ರೋಡಿನ ಶಾಸಕರ ಕಚೇರಿಯಲ್ಲಿ ಒಟ್ಟು 39,08,165 ಲಕ್ಷ ರೂ.ಗಳ ಚೆಕ್ ವಿತರಿಸಿದರು.ಬಳಿಕ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪದಿಂದ ಹಾಕಿಗೊಳಗಾದ ಸಂತ್ರಸ್ತ ಕುಟುಂಬಗಳಿಗೆ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ವಿತರಣೆಯ ಕೆಲಸ ಮಾಡಲಾಗುತ್ತಿದೆ. ಕಳೆದ ಕೆಲವು ದಿನ ಹಿಂದೆ ಸಂಭವಿಸಿದ ಮಳೆ ಹಾನಿ ಪ್ರದೇಶಕ್ಕೆ ಈಗಾಗಲೇ ತಾನು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅವರಿಗೂ ಶೀಘ್ರ ಪರಿಹಾರ ವಿತರಣೆಯ ಕಾರ್ಯ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಉಳಿ ಗ್ರಾ.ಪಂ.ಅಧ್ಯಕ್ಷ ಸುರೇಶ್ ಮೈರಾ, ಅನಂತಾಡಿ ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿ ಬಂಟ್ರಿಂಜ, ಅಮ್ಮುಂಜೆ ಗ್ರಾ.ಪಂ.ಅಧ್ಯಕ್ಷ ವಾಮನ ಆಚಾರ್ಯ, ಸದಸ್ಯರಾದ ರಾಧಾಕೃಷ್ಣ ತಂತ್ರಿ, ಕಾರ್ತಿಕ್ ಬಳ್ಳಾಲ್, ಕಳ್ಳಿಗೆ ಗ್ರಾ.ಪಂ.ಉಪಾಧ್ಯಕ್ಷ ದಾಮೋದರ್ ನೆತ್ತರಕೆರೆ, ಬರಿಮಾರು ಗ್ರಾ.ಪಂ.ಉಪಾಧ್ಯಕ್ಷ ಸದಾಶಿವ ಬರಿಮಾರು, ಮಣಿನಾಲ್ಕೂರು ಗ್ರಾ.ಪಂ.ಸದಸ್ಯ ಸಾಂತಪ್ಪ ಪೂಜಾರಿ, ಮಂಚಿ ಗ್ರಾ.ಪಂ.ಉಪಾಧ್ಯಕ್ಷ ಮೋಹನ್‍ದಾಸ್ ಶೆಟ್ಟಿ, ಸಜೀಪಮೂಡ ಗ್ರಾ.ಪಂ.ಸದಸ್ಯ ಸೀತಾರಾಮ ಅಗೋಳಿಬೆಟ್ಟು, ಬಾಳ್ತಿಲ ಗ್ರಾ.ಪಂ.ಸದಸ್ಯ ಶಿವರಾಜ್, ತಾಲೂಕು ಕಚೇರಿ ಶಿರಸ್ತೇದಾರ್ ದಿವಾಕರ ಮುಗುಳಿಯ ಉಪಸ್ಥಿತರಿದ್ದರು.

ಪ್ರಭಾರ ಕಂದಾಯ ನಿರೀಕ್ಷಕರಾದ ಧರ್ಮ ಸಾಮ್ರಾಜ್ಯ, ಮಂಜುನಾಥ್ .ಕೆ.ಎಚ್, ಕುಮಾರ್ ಟಿ.ಸಿ. ಅವರು ಫಲಾನುಭವಿಗಳ ವಿವರ ನೀಡಿದರು. ಗ್ರಾಮ ಲೆಕ್ಕಾಕಾರಿಗಳಾದ ಅನಿಲ್‍ಕುಮಾರ್, ಕರಿಬಸಪ್ಪ ನಾಯಕ್, ಪ್ರದೀಪ್ ಪಿಲಾರ್, ಯಶ್ವಿತಾ, ಅಶ್ವಿನಿ, ಸುರಕ್ಷ ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು