Tuesday, January 21, 2025
ಪುತ್ತೂರು

ವಿವೇಕಾನಂದ ಮಹಾವಿದ್ಯಾಲಯದ ನೇಚರ್‌ಕ್ಲಬ್ ವತಿಯಿಂದ “ಫ್ರೀಲಾನ್ಸ್ ಜರ್ನಲಿಸಂ” ಎಂಬ ವಿಷಯದ ಕುರಿತಾಗಿ ವೆಬಿನಾರ್ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಮಹಾವಿದ್ಯಾಲಯದ ನೇಚರ್‌ಕ್ಲಬ್ ವತಿಯಿಂದ ಪತ್ರಿಕೋದ್ಯಮ ವಿಭಾಗ, ಸಸ್ಯಶಾಸ್ತç ವಿಭಾಗ, ಪ್ರಾಣಿಶಾಸ್ತç ವಿಭಾಗ ಮತ್ತು ಐಕ್ಯೂಎಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ “ಫ್ರೀಲಾನ್ಸ್ ಜರ್ನಲಿಸಂ” ಎಂಬ ವಿಷಯದ ಕುರಿತಾಗಿ ಆಯೋಜಿಸಲಾದ ವೆಬಿನಾರ್‌ನಲ್ಲ್ಲಿ, ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಕನ್ನಡ ಪ್ರಭ ದಿನಪತ್ರಿಕೆಯ ಮುಖ್ಯ ಉಪಸಂಪಾದಕ, ‘ಕನ್ನಡ ಟ್ರಾವೆಲ್’ ವೆಬ್‌ಸೈಟ್‌ನ ಸ್ಥಾಪಕ ರಾಜೇಶ್ ಶೆಟ್ಟಿಯವರು ಪತ್ರಿಕೋದ್ಯಮ ಅನ್ನುವುದು ಅಗಾಧವಾದ ಅವಕಾಶಗಳನ್ನು ಹೊಂದಿದ ಕ್ಷೇತ್ರ. ದಿನನಿತ್ಯದ ಜೀವನದಲ್ಲಿ ಹೊಸ ಅನುಭವ, ಹೊಸ ಪಾಠಗಳನ್ನು ಕಲಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕಥೆ, ಲೇಖನಗಳನ್ನು ಪ್ರಕಟಿಸಲು ಮುದ್ರಣ ಮತ್ತು ಡಿಜಿಟಲ್ ಮಾದ್ಯಮಗಳಲ್ಲಿ ಹಲವಾರು ಅವಕಾಶಗಳು ಇದೆ. ಈ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಹವ್ಯಾಸಿ ಪತ್ರಿಕೋದ್ಯಮ ಅನ್ನುವುದು ಆದಾಯದ ಮೂಲವೂ ಹೌದು. ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಪ್ರಾಯೋಗಿಕ ವಿಷಯಗಳ ಬಗ್ಗೆ ತಿಳಿದಿರಬೇಕು. ವಿದ್ಯಾರ್ಥಿಗಳು ಲೇಖನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿದಾಗ ಓದುಗರ ಮತ್ತು ಬರಹಗಾರರ ಜ್ಞಾನವು ವೃದ್ಧಿಸುತ್ತದೆ. ವಿಷಯ ಸಂಗ್ರಹಣೆಗಾಗಿ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಬರಹಗಾರ, ಪತ್ರಕರ್ತ ಗಿರೀಶ್ ರಾವ್ ಹತ್ವಾರ್(ಜೋಗಿ), ಕಾಲೇಜಿನ ಪ್ರಾಚಾರ್ಯ ಪ್ರೊ ವಿಷ್ಣು ಗಣಪತಿ ಭಟ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ ಆರ್ ನಿಡ್ಪಳ್ಳಿ, ಉಪನ್ಯಾಸಕಿ ಸೀಮಾ ಪೋನಡ್ಕ, ಸಸ್ಯಶಾಸ್ತç ವಿಭಾಗದ ಮುಖ್ಯಸ್ಥ ಶ್ರೀಕೃಷ್ಣ ಗಣರಾಜ ಭಟ್, ಉಪನ್ಯಾಸಕಿ ಸೌಮಿತ್ರ, ನೇಚರ್ ಕ್ಲಬ್‌ನ ಸಂಯೋಜಕ ಉಪನ್ಯಾಸಕಿ ಸ್ಮಿತಾ ಪಿ.ಜಿ., ಪ್ರಾಣಿಶಾಸ್ತç ವಿಭಾಗದ ಮುಖ್ಯಸ್ಥ ಡಾ. ಈಶ್ವರ ಪ್ರಸಾದ್, ಉಪನ್ಯಾಸಕರಾದ ದಿವ್ಯಶ್ರೀ ಜಿ., ಸುಹಾಸ್‌ಕೃಷ್ಣ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರತೀಕ್ಷಾ ಕೆ.ಎಲ್. ಸ್ವಾಗತಿಸಿ, ಸಿಂಚನ ವಂದಿಸಿದರು. ಅಪೇಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು