ಪುತ್ತೂರು: ಅಂಬಿಕಾದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಪ್ರಪಂಚದಲ್ಲೇ ಭಾರತದ ಪ್ರಜಾಪ್ರಭುತ್ವ ಅತ್ಯಂತ ಹಿರಿದು. ಭಾರತದ ಸ್ವಾತಂತ್ರ್ಯಕ್ಕೋಸ್ಕರ ನೇಣಿಗೆ ಶರಣಾದವರು ಅನೇಕ ದೇಶಭಕ್ತರು. ದೇಶದ ವರ್ತಮಾನ ರಾಜಕೀಯ ಪರಿಸ್ಥಿತಿಯನ್ನು ಸರಿಪಡಿಸಲು ವಿದ್ಯಾವಂತ ದೇಶಭಕ್ತ ರಾಜಕಾರಣಿ, ನಾಯಕರ ಆವಶ್ಯಕತೆ ಇದೆ. ಆಡಳಿತದ ಮುಂಚೂಣಿಯನ್ನು ಚೆನ್ನಾಗಿ ಕೊಂಡೊಯ್ಯುವ ಜವಾಬ್ದಾರಿಯು ಭವಿಷ್ಯದಲ್ಲಿ ನಿಮ್ಮದಾಗಿರುವುದರಿಂದ ಉತ್ತಮ ನಾಯಕರನ್ನು ಸೃಷ್ಟಿಸುವ ನಿಟ್ಟಿನಲ್ಲಿ ಅಂಬಿಕಾ ವಿದ್ಯಾಲಯದಲ್ಲಿ ಉತ್ತಮ ರೀತಿಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯುತ್ತದೆ. ಎದೆಗಾರಿಕೆಯುಳ್ಳ ಧೀರೋದಾತ್ತ ನಾಯಕರನ್ನು ನಿರ್ಮಿಸುವ ಎದೆಗಾರಿಕೆ ಶಿಕ್ಷಣ ಸಂಸ್ಥೆಗಳದ್ದು. ಲಾಲ್ ಬಹದ್ದೂರ್ ಶಾಸ್ತ್ರಿಗಳಂತಹ ದೇಶಭಕ್ತ ನಾಯಕ, ರಾಜಕಾರಣಿಗಳು ಎಂದೆಂದಿಗೂ ಆದರ್ಶ ಪ್ರಾಯರು, ಅನುಕರಣೀಯರು. ಭಗತ್ ಸಿಂಗ್‍ನಂತಹ ದೇಶಭಕ್ತರು ಸದಾ ಸ್ಮರಣೀಯರು. ಭ್ರಷ್ಟಾಚಾರ ನಿರ್ಮೂಲನೆಯ ಅಗತ್ಯ ದೇಶಕ್ಕಿದೆ. ದೇಶ ಕಟ್ಟುವ ನಿಟ್ಟಿನಲ್ಲಿ ಪಾರದರ್ಶಕ, ಆತ್ಮ ಸಮರ್ಪಣಾ ಮನೋಭಾವದ ಯುವ ನಾಯಕರು ಮುಂದಕ್ಕೆ ಅಂಬಿಕಾದಿಂದ ನಿರ್ಮಾಣವಾಗಬೇಕು ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ನಡೆಯುವ ಚುನಾವಣೆಯ ಸಂದರ್ಭ ಸಭೆಯಲ್ಲಿ ಚುನಾವಣೆಯ ಮಹತ್ವ ಮತ್ತು ದೇಶಭಕ್ತ ನಾಯಕರ ಅವಶ್ಯಕತೆಯ ಕುರಿತು ವಿದ್ಯಾರ್ಥಿಗಳಿಗೆ ಉತ್ತೇಜನದ ಮಾತುಗಳನ್ನಾಡಿ ಪೆÇ್ರೀತ್ಸಾಹಿಸಿದರು. ಕಸಬ್‍ನನ್ನು ಗಲ್ಲಿಗೇರಿಸಿದ ಪೇದೆಗೆ ಪೆÇ್ರೀತ್ಸಾಹ ರೂಪವಾಗಿ ದೇಣಿಗೆ ನೀಡಿರುವ ಬಗ್ಗೆ, ಸ್ವಚ್ಛತಾ ಆಂದೋಲನ, ನೂರು ಪ್ರತಿಶತ ಫಲಿತಾಂಶ ಸಾಧನೆಯ ಬಗ್ಗೆ ಗತ ವರ್ಷದ ಹಿರಿಯ ವಿದ್ಯಾರ್ಥಿ ನಾಯಕರು ಹಾಗೂ ವಿದ್ಯಾರ್ಥಿಗಳನ್ನೆಲ್ಲಾ ಸ್ಮರಿಸಿಕೊಂಡು ಅವರನ್ನು ಅನುಸರಿಸಿ ಅಂಬಿಕಾ ವಿದ್ಯಾಲಯದ ಘನತೆ ಗೌರವವನ್ನು ಮುಂದಕ್ಕೂ ಎತ್ತಿ ಹಿಡಿಯಿರಿ. ಉತ್ತಮ ನಾಯಕರಾಗಿ ಎಂದು ಶುಭ ಹಾರೈಸಿದರು. ವಿದ್ಯಾರ್ಥಿ ಸಂಘದ ಚುನಾವನೆಯಲ್ಲಿ ಕಾರ್ಯದರ್ಶಿ ಹಾಗೂ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಿದ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಗೆ ತಮ್ಮನ್ನು ಪರಿಚಯಿಸಿ ತಮ್ಮ ಕಾರ್ಯಕ್ಷಮತೆಯ ಬಗ್ಗೆ ತಿಳಿಸಿದರು. ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಖಜಾಂಜಿ ರಾಜಶ್ರೀ ಎಸ್ ನಟ್ಟೋಜ, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಗಣಕಶಾಸ್ತ್ರ ಉಪನ್ಯಾಸಕ ಪ್ರದೀಪ್ ಹಾಗೂ ಗಣಿತಶಾಸ್ತ್ರ ಉಪನ್ಯಾಸಕಿ ಶೈನಿ ಕೆ ಜೆ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಉಪನ್ಯಾಸಕಿ ಶೈನಿ ಕೆ ಜೆ ಕಾರ್ಯಕ್ರಮ ನಿರೂಪಿಸಿದರು. ಕಛೇರಿ ಅಧೀಕ್ಷಕರಾದ ರವಿಚಂದ್ರ ಮತ್ತು ಪ್ರಯೋಗಾಲಯ ಸಹಾಯಕರಾದ ಮುರಳಿ ಮೋಹನ ಸಹಕರಿಸಿದರು.
You Might Also Like
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಫುಡ್ ಫೆಸ್ಟ್-ಕಹಳೆ ನ್ಯೂಸ್
ಪುತ್ತೂರು; ದೂರದೃಷ್ಟಿ, ಕಠಿಣ ಪರಿಶ್ರಮಗಳೇ ಯಶಸ್ಸಿನ ಮೆಟ್ಟಿಲು. ಅವಕಾಶಗಳು ಸಿಕ್ಕಾಗಲೆಲ್ಲಾ ನಿಮ್ಮ ಗುರಿಯನ್ನು ತಲುಪಲು ಅವುಗಳನ್ನು ಬಳಸಿಕೊಳ್ಳಿ’ ಎಂದು ಮಂಗಳೂರಿನ ವಾಣಿಜ್ಯೋದ್ಯಮಿ ಶ್ರೀ ವಿಜಿತ್ ಶೆಟ್ಟಿ ಅವರು...
ನೀರು, ಭೂಮಿ, ಗಾಳಿ, ಆಕಾಶ ಮತ್ತು ಬೆಂಕಿ ಇದು ಪಂಚಭೂತಗಳು-ಕಿಶೋರ್ ಕುಮಾರ್ ಬೊಟ್ಯಾಡಿ-ಕಹಳೆ ನ್ಯೂಸ್
ಪುತ್ತೂರು: . ಆಕಾಶದಿಂದ ತೊಡಗಿ ಸ್ಥೂಲಗೊಳ್ಳುತ್ತಾ ಪೃಥ್ವಿಯವರೆಗೆ ಪಂಚಭೂತಗಳು ವಿಸ್ತರಿಸಿವೆ. ಜೀವಿಗಳ ಶರೀರಗಳೂ ಇದರಿಂದ ನಿರ್ಮಿತವಾಗಿವೆ. ಇವು ಸಹಕರಿಸದಿದ್ದರೆ ನಾವೆಷ್ಟು ಹೋರಾಡಿದರೂ ಏನನ್ನೂ ಸಾಧಿಸಲಾಗದು ಎಂದು ಕರ್ನಾಟಕ...
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ವಾಣಿಜ್ಯ ಸಂಘದ ಚಟುವಟಿಕೆಗಳ ಉದ್ಘಾಟನೆ-ಕಹಳೆ ನ್ಯೂಸ್
ಪುತ್ತೂರು: ವಿದ್ಯಾರ್ಥಿ ಜೀವನ ಬಂಗಾರವಾಗಲು ವಿದ್ಯಾರ್ಥಿಯಾಗಿ ಕಠಿಣ ಪರಿಶ್ರಮ ಅಗತ್ಯ. ವೈಫಲ್ಯಗಳು ಯಶಸ್ಸಿನ ಭಾಗವೇ ಆಗಿರುವುದರಿಂದ ವೈಫಲ್ಯಗಳಿಗೆ ಸಿದ್ಧರಾಗಿರಿ ಮತ್ತು ಅದು ಯಶಸ್ಸನ್ನು ಸಾಧಿಸಲು ಸಹಕಾರಿ ಎಂದು...
ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿAಗ್ ಎಂಡ್ ಟೆಕ್ನಾಲಜಿಯ ಮಹಿಳೆಯರ ಕಬಡ್ಡಿ ತಂಡವು ರಾಜ್ಯಮಟ್ಟದ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ-ಕಹಳೆ ನ್ಯೂಸ್
ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿAಗ್ ಎಂಡ್ ಟೆಕ್ನಾಲಜಿಯ ಮಹಿಳೆಯರ ಕಬಡ್ಡಿ ತಂಡವು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿಕೊಂಡಿದೆ....