Wednesday, January 22, 2025
ಬಂಟ್ವಾಳ

ಬಂಟ್ವಾಳದಲ್ಲಿ ಪರಿಚಿತರಿಂದಲೆ ಬಾಲಕಿಯ ಕಿಡ್ನಾಪ್, ಮತ್ತು ಬರಿಸುವ ಔಷಧಿ ನೀಡಿ ಗ್ಯಾಂಗ್ ರೇಪ್ – ಕಹಳೆ ನ್ಯೂಸ್

ಬಂಟ್ವಾಳ: ಅಪ್ರಾಪ್ತ ಬಾಲಕಿಯನ್ನ ಅಪಹರಿಸಿ, ಆಕೆಗೆ ಚಾಕಲೇಟಿನಲ್ಲಿ ಮತ್ತು ಬರಿಸುವ ಔಷಧಿ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆಯಲ್ಲಿ ನಡೆದಿದೆ.

ಬಸ್ ಸ್ಟಾಂಡ್ ಬಳಿ ನಿಂತಿದ್ದ ಶಾಲಾ ಬಾಲಕಿಯನ್ನು ಪರಿಚಿತರೇ ಚಾಕಲೇಟಿನಲ್ಲಿ ಮತ್ತು ಬರಿಸುವ ಔಷಧಿ ನೀಡಿ, ಬಂಟ್ವಾಳದ ಅಮ್ಟಾಡಿಯ ಮನೆಯೊಂದಕ್ಕೆ ಕರೆದೊಯ್ದು ಗ್ಯಾಂಗ್ ರೇಪ್ ನಡೆಸಿದ್ದಾರೆ. ಬಳಿಕ ಆರೋಪಿಗಳು ಬಾಲಕಿಯನ್ನು ಬ್ರಹ್ಮರಕೂಟ್ಲು ಬಳಿ ಬಿಟ್ಟು ಹೋಗಿದ್ದಾರೆ. ಈ ದೃಶ್ಯಗಳು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು ಗ್ಯಾಂಗ್ ರೇಪ್‌ನಲ್ಲಿ ಐವರು ಕಾಮುಕರು ಇರುವುದು ಪತ್ತೆಯಾಗಿದೆ. ಬಾಲಕಿ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು