Recent Posts

Tuesday, January 21, 2025
ಸುದ್ದಿ

ಶರನ್ನವರಾತ್ರಿಯ ಪ್ರಯುಕ್ತ ಅಡ್ಯಾರ್ ಪದವು ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಡಾ. ವೈ. ಭರತ್ ಶೆಟ್ಟಿ- ಕಹಳೆ ನ್ಯೂಸ್

ಮಂಗಳೂರು : ಶರನ್ನವರಾತ್ರಿಯ ಪ್ರಯುಕ್ತ ಶ್ರೀಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಅಡ್ಯಾರ್ ಪದವಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ಮಂಗಳೂರು ಉತ್ತರ ಶಾಸಕರಾದ ಡಾ. ವೈ. ಭರತ್ ಶೆಟ್ಟಿಯವರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಡಿ 13.20 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕೃತಗೊಂಡು ಪುನರ್ ನಿರ್ಮಾಣವಾದ ಪೌಳಿಯನ್ನು ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿಗಳಾದ ಸೀತಾರಾಮ ಆಚಾರ್ಯ ಹಾಗೂ ಪ್ರಧಾನ ಅರ್ಚಕರಾದ ಪ್ರಕಾಶ್ ಭಟ್, ದೇವಸ್ಥಾನದ ಅಧ್ಯಕ್ಷರಾದ ಪುಷ್ಪರಾಜ್ ಕುಲಾಲ್, ಗೌರವ ಅಧ್ಯಕ್ಷರಾದ ರಾಜರತ್ನ ಸನಿಲ್, ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್, ಕ್ಷೇತ್ರದ ಗೌರವ ಸಲಹೆಗಾರರಾದ ದಾಮೋದರ ಶೆಟ್ಟಿ, ಪ್ರಸಾದ್ ಸುವರ್ಣ, ಉಪಾಧ್ಯಕ್ಷರಾದ ಕೆ. ಆರ್. ಶೆಟ್ಟಿ ಅಡ್ಯಾರ್ ಪದವು, ಹರ್ಷಿತ್ ಪೂಜಾರಿ ಅಡ್ಯಾರ್ ಪದವು, ಪ್ರದಾನ ಕಾರ್ಯದರ್ಶಿ ಸುಜಿತ್ ಕುಮಾರ್, ಕೋಶಾಧಿಕಾರಿ ಯೋಗಿಶ್ ಆಚಾರ್ಯ, ನವರಾತ್ರಿ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಾದವ ಸಾಲ್ಯಾನ್, ಉಪಾಧ್ಯಕ್ಷರಾದ ಸವಿತಾ ಶೆಟ್ಟಿಗಾರ್, ರತನ್ ಪೂಜಾರಿ ಸಮಿತಿ ಸದಸ್ಯರಾದ ದಿನೇಶ್ ಹಾಗೂ ಆಡಳಿತ ಸಮಿತಿ ಮತ್ತು ನವರಾತ್ರಿ ಉತ್ಸವ ಸಮಿತಿಯ ಸದಸ್ಯರು ಹಾಗೂ ಕ್ಷೇತ್ರದ ಭಕ್ತಾದಿಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು