Monday, January 20, 2025
ಬಂಟ್ವಾಳ

ಬಿಲ್ಲವ ಗ್ರಾಮ ಸಮಿತಿ ಅಮ್ಟೂರು ಆಶ್ರಯದಲ್ಲಿ ಕಟ್ಟೆ ಮಾರು ಮಂತ್ರದೇವತೆ ಸಾನಿಧ್ಯದಲ್ಲಿ ಅಭಿನಂದನಾ ಕಾರ್ಯಕ್ರಮ – ಕಹಳೆ ನ್ಯೂಸ್

ಕಲ್ಲಡ್ಕ : ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಡ್ಕ ವಲಯ ಇದರ ಬಿಲ್ಲವ ಗ್ರಾಮ ಸಮಿತಿ ಅಮ್ಟೂರು ಆಶ್ರಯದಲ್ಲಿ ಕಟ್ಟೆಮಾರು ಮಂತ್ರದೇವತೆ ಸಾನಿಧ್ಯದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಬಿರ್ವೆರ್ ಕಡೇಶಿವಾಲಯದ ಮಾಜಿ ಅಧ್ಯಕ್ಷರಾದ ವಿದ್ಯಾಧರ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

   

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕರಾದ ರುಕ್ಮಯ್ಯ ಪೂಜಾರಿ ಛಲ ಮತ್ತು ಸಾಧನೆ ಇದ್ದರೆ ಉತ್ತಮ ನಾಯಕನಾಗಿ ಹೊರಹೊಮ್ಮಲು ಸಾಧ್ಯ ಎಂದು ಸಾಧನೆಯ ಸಾಧಕರನ್ನು ಅಭಿನಂದಿಸಿ ಮಾತನಾಡಿದರು.

ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತರಾದ ಶ್ರೀಮತಿ ಸುಚೇತ ಪೂಜಾರಿ, ಕಥೆ-ಕಾದಂಬರಿ ಬರಹಗಾರ ಧೀರಜ್ ಪೋಯ್ಯೆಕಂಡ, ಅಂತರಾಷ್ಟ್ರೀಯ ಮಟ್ಟದ ಜೂಡೋ ಸ್ಪರ್ಧೆಯಲ್ಲಿ ಬಂಗಾರದ ಪದಕ ವಿಜೇತ ನಿಷಿತ್ ಪೂಜಾರಿ, ಚಲನಚಿತ್ರ ನಟಿ ದುನಿಯಾ ರಶ್ಮಿ ಹಾಗೂ ಕಟ್ಟೆಮಾರು ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀಯುತ ಮನೋಜ್ ಕಟ್ಟೆಮಾರ್ ಅವರನ್ನು ಶಾಲು ಹೊದಿಸಿ, ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ್ಲ ಮಾಜಿ ಶಾಸಕರಾದ ರುಕ್ಮಯ್ಯ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚೆನ್ನಪ್ಪ. ಆರ್ ಕೋಟ್ಯಾನ್, ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಡ್ಕ ವಲಯ ಇದರ ಪ್ರಧಾನ ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ, ರಾಯಿ ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಪೂಜಾರಿ ರಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬಿಲ್ಲವ ಸಮಾಜ ಸೇವಾ ಸಂಘ ಅಮ್ಟೂರು ಗ್ರಾಮ ಸಮಿತಿ ಅಧ್ಯಕ್ಷರಾದ ಮನೋಜ್ ಕಟ್ಟೆಮಾರ್ ಪ್ರಾಸ್ತವಿಕದೊಂದಿಗೆ ಸ್ವಾಗತಿಸಿ, ವಸಂತ ಬಟ್ಟಿಹಿತ್ಲು ಧನ್ಯವಾದ ಸಲ್ಲಿಸಿದರು. ಸಂತೋಷ್ ಕುಮಾರ್ ಬೋಲ್ಪೋಡಿ ಕಾರ್ಯಕ್ರಮ ನಿರ್ವಹಿಸಿದರು.