Recent Posts

Sunday, January 19, 2025
ಕ್ರೀಡೆ

ಮತ್ತೆ ಅಭಿಮಾನಗಳ ಮನ ಗೆದ್ದ ಎಂಎಸ್ ಧೋನಿ – ಟಿ20 ವಿಶ್ವಕಪ್‌ನಲ್ಲಿ ಸಂಭಾವನೆ ಇಲ್ಲದೆ ಸೇವೆ – ಕಹಳೆ ನ್ಯೂಸ್

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ. ಎಸ್ ಮುಂಬರುವ ಟಿ೨೦ ವಿಶ್ವಕಪ್‌ನಲ್ಲಿ ಭಾರತ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿರುವ ಮಾಜಿ ನಾಯಕ ಎಂಎಸ್ ಧೋನಿ, ಇದಕ್ಕಾಗಿ ಯಾವುದೇ ಸಂಭಾವನೆ ಪಡೆದುಕೊಳ್ಳುವುದಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ತಿಂಗಳು ಭಾರತ ತಂಡವನ್ನು ಪ್ರಕಟಿಸುವ ಸಮಯದಲ್ಲೇ 40 ವರ್ಷದ ಧೋನಿ ಅವರನ್ನು ಮೆಂಟರ್ ಆಗಿ ನೇಮಿಸಲಾಗಿತ್ತು. 2007ರ ಚೊಚ್ಚಲ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕರಾಗಿರುವ ಧೋನಿ, ಐಪಿಎಲ್‌ನಲ್ಲೂ ಸಿಎಸ್‌ಕೆ ತಂಡವನ್ನು ೩ ಬಾರಿ ಚಾಂಪಿಯನ್, 6 ಬಾರಿ ಫೈನಲ್‌ಗೆ ಮತ್ತು 11ಬಾರಿ ಪ್ಲೇಆಫ್ ಹಂತಕ್ಕೇರಿಸಿದ ಸಾಧನೆ ತೋರಿದ್ದಾರೆ. ಅವರ ಈ ಚುಟುಕು ಕ್ರಿಕೆಟ್ ಅನುಭವವನ್ನು ಬಳಸಿಕೊಳ್ಳಲು ಮೆಂಟರ್ ಆಗಿ ನೇಮಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದ್ರೆ ಧೋನಿ, ಈ ಅವಧಿಯಲ್ಲಿ ಹಣ ಪಡೆಯದೆ ತಂಡದ ಪರ ಕಾರ್ಯ ನಿರ್ವಹಿಸಲಿದ್ದಾರೆ. ಈ ಬಗ್ಗೆ ಸ್ವತಃ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯೇ ಮಾಹಿತಿ ನೀಡಿದ್ದು, ಟೀಮ್ ಇಂಡಿಯಾದ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿರುವ ಧೋನಿ, ಇದಕ್ಕಾಗಿ ಯಾವುದೇ ಹಣ ಪಡೆಯುತ್ತಿಲ್ಲ ಎಂದು ತಿಳಿಸಿದ್ದಾರೆ.
‘ಮೆಂಟರ್ ಆಗಿ ಟೀಮ್ ಇಂಡಿಯಾಗೆ ಸೇವೆ ಸಲ್ಲಿಸುವುದಕ್ಕಾಗಿ ಧೋನಿ ನಯಾಪೈಸೆಯನ್ನೂ ತೆಗೆದುಕೊಳ್ಳುವುದಿಲ್ಲ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಕೂಡ ಸ್ಪಷ್ಟಪಡಿಸಿದ್ದಾರೆ.

ಧೋನಿಯ ಈ ಹೃದಯ ವೈಶಾಲ್ಯತೆಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಧೊನಿಯನ್ನ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.