Monday, January 20, 2025
ಹೆಚ್ಚಿನ ಸುದ್ದಿ

ಆರ್ಯನ್ ಖಾನ್ ಬಳಿ ಡ್ರಗ್ಸ್ ಸಿಕ್ಕಿಲ್ಲ- ಆದರೂ ಜಾಮೀನು ನೀಡಬಾರದು ಎಂದ ಎನ್‍ಸಿಬಿ..? – ಕಹಳೆ ನ್ಯೂಸ್

ಐಷಾರಾಮಿಕ್ರೂಸ್ ಹಡಗಿನ ಮೇಲೆ ರೇಡ್ ನಡೆದು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದಲ್ಲಿರುವ ಆರ್ಯನ್ ಖಾನ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನ ಮುಂಬೈನ ವಿಶೇಷ ಕೋರ್ಟ್ ನಡೆಸುತ್ತಿದೆ. ಆದರೆ ಆರ್ಯನ್ ಖಾನ್ ಅವರಿಗೆ ಜಾಮೀನು ನೀಡಬಾರದು ಎಂದು ಎನ್‍ಸಿಬಿ ಪಟ್ಟು ಹಿಡಿದಿದೆ. ಇದಕ್ಕೆ ನಾನಾ ಕಾರಣಗಳನ್ನು ಎನ್‍ಸಿಬಿ ಕೋರ್ಟ್‍ಗೆ ನೀಡಿದೆ.

ಐಷಾರಾಮಿಕ್ರೂಸ್ ಹಡಗಿನ ಮೇಲೆ ರೇಡ್ ಮಾಡಿದಾಗ ಆರ್ಯನ್ ಬಳಿ ಡ್ರಗ್ ಸಿಕ್ಕಿಲ್ಲ. ಆದರೆ, ಅವರು ಡ್ರಗ್ ಪೆಡ್ಲರ್‍ಗಳ ಜತೆ ಸಂಪರ್ಕದಲ್ಲಿದ್ದರು. ಇದು ಆರ್ಯನ್ ಬಂಧನಕ್ಕೆ ನಿಜವಾದ ಕಾರಣ. ಈ ಬಗ್ಗೆ ಎನ್‍ಸಿಬಿ ಕೋರ್ಟ್‍ಗೆ ಮಾಹಿತಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

‘ಆರ್ಯನ್ ಅವರ ಹೆಚ್ಚಿನ ವಿಚಾರಣೆ ಅಗತ್ಯವಿದೆ. ಆರ್ಯನ್ ಖಾನ್ ಬಳಿ ದಾಳಿ ವೇಳೆ ಡ್ರಗ್ಸ್ ಸಿಕ್ಕಿಲ್ಲ. ಆದರೂ ಡ್ರಗ್ಸ್ ಖರೀದಿಸಿರುವ ಬಗ್ಗೆ ಪುರಾವೆ ಸಿಕ್ಕಿವೆ. ಅಲ್ಲದೆ ವಿದೇಶಗಳ ವಹಿವಾಟು ಸಂಬಂಧಿಸಿ ತನಿಖೆ ಮಾಡಬೇಕಿದೆ. ಡ್ರಗ್ಸ್ ಹಂಚಿಕೆಯಲ್ಲಿ ಆರ್ಯನ್ ಖಾನ್ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಎನ್‍ಸಿಬಿ ಕೋರ್ಟ್‍ಗೆ ತಿಳಿಸಿದೆ.