ಪುತ್ತೂರು : ಕಳೆದ 13 ವರ್ಷಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ.)ಪುತ್ತೂರು ಇದರಡಿಯಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಅ. 12ರಂದು ಶಾರದೋತ್ಸವದ ಅಂಗವಾಗಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಮುಖ್ಯ ಅರ್ಚಕರಾದ ವಿ.ಎಸ್.ಭಟ್ ರವರ ಪುತ್ರ ಆಶ್ಲೇಷ್ ರವರ ನೇತೃತ್ವದಲ್ಲಿ ಶಾರದಾಮಾತೆಯನ್ನು ಪೀಠಾಲಂಕೃತಳಾನ್ನಾಗಿಸಿ, 14ನೇ ವರ್ಷದ ಶಾರದ ಪೂಜೆಯನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲರಾದ ಕೆ.ಹೇಮಲತಾ ಗೋಕುಲ್‍ನಾಥ್ ಇದೇ ಮೊದಲಬಾರಿಗೆ ನಮ್ಮ ಸಂಸ್ಥೆಯಲ್ಲಿ ಮಂಗಳೂರಿನ ನುರಿತ ಉಪನ್ಯಾಸಕರಿಂದ ಕೆಸಿಇಟಿ, ನೀಟ್, ಜೆಇಇ ಆಫ್ಲೈನ್ ತರಗತಿಗಳು ಅ.17 ರಿಂದ ಪ್ರಾರಂಭಗೊಳ್ಳಲಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ಪೂಜಾ ಕಾರ್ಯದಲ್ಲಿ ಸಂಸ್ಥೆಯ ಸಂಚಾಲಕರಾದ ಪಿ.ವಿ.ಗೋಕುಲ್‍ನಾಥ್ , ಪ್ರಾಂಶುಪಾಲರಾದ ಕೆ.ಹೇಮಲತಾ ಗೋಕುಲ್‍ನಾಥ್‍ಉಪಸ್ಥಿತರಿದ್ದರು. ಮೂರು ದಿನಗಳ ಸತತ ಪೂಜೆಗಳು ನಡೆದಿದ್ದು, ಉಪನ್ಯಾಸಕ ವೃಂದ, ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ನವೋದಯ ವಿದ್ಯಾರ್ಥಿಗಳು ಭಕ್ತವೃಂದವಾಗಿ ದೇವರ ಕೃಪೆಗೆ ಪಾತ್ರರಾದರು.