27 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಡಾ.ವೈ.ಭರತ್ ಶೆಟ್ಟಿ – ಕಹಳೆ ನ್ಯೂಸ್
ದ.ಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಮುತ್ತೂರು ಪಂಚಾಯತ್ ಇದರ ಸಹಯೋಗದೊಂದಿಗೆ ದಿನಾಂಕ 13/10/2021ರಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ, ಸಂಜೀವಿನಿ ಒಕ್ಕೂಟದ ನೂತನ ಕಟ್ಟಡ ಹಾಗೂ ಮುತ್ತೂರು ತಾಕೀಮಾರ್ ಅಂಗನವಾಡಿ ಹೊಸ ಕಟ್ಟಡ ಮತ್ತು ತಾಲೂಕು ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಳ್ಳಾಜೆ ಅಂಬೆಡ್ಕರ್ ಭವನದ ಕಟ್ಟಡದ ಬಳಿ ಸಾರ್ವಜನಿಕ ಶೌಚಾಲಯದ ಒಟ್ಟು ಮೊತ್ತ ಸುಮಾರು 27 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಕಾರ್ಯವನ್ನು ಇಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ.ಭರತ್ ಶೆಟ್ಟಿಯವರು ನೆರವೇರಿಸಿದರು.
ಶಾಸಕರ ಜೊತೆಗೆ ಪಂ.ಅಧ್ಯಕ್ಷರಾದ ಸತೀಶ್ ಬಳ್ಳಾಜೆ, ಉಪಾಧ್ಯಕ್ಷೆ ಶ್ರೀಮತಿ ಮಾಲತಿ,ಪಂಚಾಯತ್ ಸದಸ್ಯರುಗಳಾದ ಪ್ರವೀಣ್ ಆಳ್ವ, ಜಗದೀಶ್ ದುರ್ಗಾಕೋಡಿ, ತಾರಾನಾಥ್ ಕುಲಾಲ್,ತೋಮಸ್, ರುಕ್ಮಿಣಿ, ಪುಷ್ಪ ನಾಯ್ಕ, ಸುಷ್ಮಾ,ಶಶಿಕಲಾ, ವನಿತಾ,ಪಂಚಾಯತ್ ಅಧಿಕಾರಿ ಪ್ರಮೋದ್, ಕಾರ್ಯದರ್ಶಿ ವಸಂತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಯಾದ ಶೈಲಾ ಕಾರಗಿ, ಅಂಗನವಾಡಿ ಮೇಲ್ವಿಚಾರಕಿ ಮಾಲಿನಿ, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು