ಮಂಗಳೂರು : ವ್ಯಕ್ತಿಯೊಬ್ಬರಿಗೆ ದುಷ್ಕರ್ಮಿಗಳು ಚೂರಿ ಇರಿದು ಪರಾರಿಯಾಗಿರುವ ಘಟನೆ ಕಾವೂರು ಠಾಣೆ ವ್ಯಾಪ್ತಿಯ ಮಾಲೆಮಾರ್ ಬಳಿ ನಡೆದಿದೆ.
ಪಂಜಿಮೊಗರು ನಿವಾಸಿ ರಾಜೇಶ್ (45) ಎಂದಿನಂತೆ ನಿನ್ನೆ ರಾತ್ರಿ ಕೆಲಸ ಮುಗಿಸಿ ಕೊಟ್ಟಾರದಿಂದ ಮನೆಗೆ ಹೋಗುತ್ತಿದ್ದಾಗ ಮಾಲೆಮಾರ್ ಬಳಿ ದುಷ್ಕರ್ಮಿಗಳ ತಂಡ ರಾಜೇಶ್ ಅವರ ಬೆನ್ನಿಗೆ ಚೂರಿಯಿಂದ ಮೂರು ಬಾರಿ ಇರಿದು ಪರಾರಿಯಾಗಿದ್ದಾರೆ. ಗಾಯಗೊಂಡ ರಾಜೇಶ್ನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪಕ್ಕೆಲುಬು ಮತ್ತು ಸೊಂಟದ ಭಾಗಗಳಿಗೆ ಗಾಯವಾಗಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಾವೂರು ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.