Recent Posts

Monday, January 20, 2025
ಸುದ್ದಿ

ಬಡಗ ಎಡಪದವು ಶ್ರೀ ಆದಿಶಕ್ತಿ ಆಟೋ ರಿಕ್ಷಾ ಪಾರ್ಕ್‍ನ ಮೇಲ್ಚಾವಣಿಯ ದುರಸ್ಥಿ – ಶಾಸಕ ವೈ. ಭರತ್ ಶೆಟ್ಟಿಯವರಿಂದ ಉದ್ಘಾಟನೆ – ಕಹಳೆ ನ್ಯೂಸ್

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಡಗ ಎಡಪದವು ಶ್ರೀ ಆದಿಶಕ್ತಿ ಆಟೋ ರಿಕ್ಷಾ ಪಾರ್ಕ್‍ನ ಮೇಲ್ಚಾವಣಿಯ ವ್ಯವಸ್ಥೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಅನುಷ್ಟಾನಗೊಂಡಿದ್ದು, ಶಾಸಕರಾದ ವೈ. ಭರತ್ ಶೆಟ್ಟಿಯವರು ಅದನ್ನು ಉದ್ಘಾಟಿಸಿದರು.

 
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಜನಾರ್ಧನ ಗೌಡ, ಬಡಗ ಎಡಪದವು ಗ್ರಾಮ ಪಂಚಾಯತಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಯಶೋಧ, ಎಡಪದವು ಮಹಾಶಕ್ತಿ ಅಧ್ಯಕ್ಷರಾದ ಪ್ರಸಾದ್ ಕುಮಾರ್ ಎಂ, ಶಕ್ತಿಕೇಂದ್ರ ಪ್ರಮುಖರಾದ ತಾರನಾಥ ಸಫಳಿಗ, ಆಟೋರಿಕ್ಷಾ ಮಾಲಕರ ಸಂಘದ ಅಧ್ಯಕ್ಷ ಸಂತೋಷ್, ಗ್ರಾಮ ಪಂಚಾಯತ್ ಸದಸ್ಯರು, ರಿಕ್ಷಾ ಚಾಲಕರು, ಮಾಲಕರು , ಶಿವಪ್ರಸಾದ್ ಶೆಟ್ಟಿ, ಉಮನಾಥ, ದೇವದಾಸ್, ಗ್ರಾಮಸ್ಥರು ಹಾಗೂ ಪಕ್ಷದ ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು