ನನಗೆ ಮುಖ ತೋರಿಸಲು ಮುಜುಗರವಾಗುತ್ತಿದೆ- ಪಕ್ಷದಿಂದ ಉಚ್ಛಾಟನೆ ಮಾಡಿರುವುದು ನೋವು ತಂದಿದೆ : ಸಲೀಂ – ಕಹಳೆ ನ್ಯೂಸ್
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕರಾದ ಸಲೀಂ ಹಾಗೂ ವಿ.ಎಸ್.ಉಗ್ರಪ್ಪ ಅವರ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ನಡುವೆ ಅಚಾನಕ್ ಆಗಿ ನಡೆದ ಘಟನೆಗೆ ಕ್ಷಮೆ ಕೋರುವೆ, ಉದ್ದೇಶಪೂರ್ವಕವಾಗಿ ಮಾತನಾಡಿದ್ದಲ್ಲ ಎಂದು ಸಲೀಂ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಲೀಂ, ನಿನ್ನೆ ನಡೆದ ಘಟನೆಯಿಂದ ನಾನು ಸಾಕಷ್ಟು ನೊಂದಿದ್ದೇನೆ. ನನಗೆ ಮುಖ ತೋರಿಸಲು ಮುಜುಗರವಾಗುತ್ತಿದೆ. ಡಿ.ಕೆ.ಶಿವಕುಮಾರ್ ಅವರ ಬಳಿ ಕೈ ಮುಗಿದು ಕ್ಷಮೆ ಯಾಚಿಸುತ್ತೇನೆ ಎಂದರು. ಡಿ.ಕೆ.ಶಿವಕುಮಾರ್ ನನಗೆ ಗಾಡ್ ಫಾದರ್. ನನ್ನ ಉಸಿರು ಇರುವವರೆಗೂ ನಾನು ಕಾಂಗ್ರೆಸ್ ನಲ್ಲಿರುತ್ತೇನೆ. ನಾನು ಕೆಪಿಸಿಸಿ ಸದಸ್ಯ ಕೂಡ ಹೌದು. ಆದರೆ ನನ್ನನ್ನು ಉಚ್ಛಾಟನೆ ಮಾಡಿರುವುದು ನೋವು ತಂದಿದೆ ಎಂದು ಹೇಳಿದರು.