Recent Posts

Monday, January 20, 2025
ಕ್ರೈಮ್ಸುದ್ದಿ

ಕಾರವಾರ: ಹಬ್ಬದ ದಿನವೇ ಘೋರ ಕೃತ್ಯ: ಅಡುಗೆ ವಿಚಾರದಲ್ಲಿ ಕಿರಿಕ್: ತಾಯಿ, ತಂಗಿಯನ್ನೇ ಗುಂಡಿಕ್ಕಿ ಹತ್ಯೆ ಮಾಡಿದ ಪುತ್ರ – ಕಹಳೆ ನ್ಯೂಸ್

ಕಾರವಾರ: ಮದ್ಯದ ನಶೆಯಲ್ಲಿ ಯುವಕನೋರ್ವ ಗುಂಡು ಹಾರಿಸಿ ತನ್ನ ತಾಯಿ ಮತ್ತು ತಂಗಿಯನ್ನು ಹತ್ಯೆ ಮಾಡಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ದೊಡ್ಡಮನೆ ಗ್ರಾಮದ ಕುರುಗೋಡು ನಿವಾಸಿ ಮಂಜುನಾಥ ಕುಡಿದ ಮತ್ತಿನಲ್ಲಿ ಊಟಕ್ಕೆ ಬಂದು ಅಡುಗೆ ವಿಚಾರದಲ್ಲಿ ಕಿರಿಕ್ ಮಾಡಿಕೊಂಡು ತಾಯಿ ಪಾರ್ವತಿ ನಾರಾಯಣ ಹಸ್ಲರ್ ಹಾಗೂ ತಂಗಿ ರಮ್ಯಾ ನಾರಾಯಣ ಹಸ್ಲರ್ ಅವರನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಿರಸಿ ಪೊಲೀಸ್ ಉಪಾಧೀಕ್ಷಕ ರವಿ ನಾಯ್ಕ ತನಿಖೆ ಕೈಗೊಂಡಿದ್ದು, ಸದ್ಯ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು