Sunday, January 19, 2025
ಸಂತಾಪ

ಹಿರಿಯ ನಟ ಪ್ರೊ. ಜಿ.ಕೆ. ಗೋವಿಂದ ರಾವ್ ನಿಧನ – ಕಂಬನಿ ಮಿಡಿದ ಚಿತ್ರರಂಗ – ಕಹಳೆ ನ್ಯೂಸ್

ಕನ್ನಡದ ಹಿರಿಯ ನಟ ಪ್ರೊ. ಜಿ.ಕೆ. ಗೋವಿಂದ ರಾವ್ ಶುಕ್ರವಾರ ಬೆಳಿಗ್ಗೆ ಹುಬ್ಬಳ್ಳಿಯ ಅವರ ಪುತ್ರಿಯ ಮನೆಯಲ್ಲಿ ನಿಧನರಾಗಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರದ ಮುಕ್ತಿಧಾಮದಲ್ಲಿ ಇಂದು ಬೆಳಿಗ್ಗೆ ೮ ಗಂಟೆಗೆ ಅಂತ್ಯಸ0ಸ್ಕಾರ ನಡೆದಿದೆ.

ವೃತ್ತಿಯಿಂದ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರು, ರಂಗಭೂಮಿ ಕಲಾವಿದರೂ ಆಗಿದ್ದರು. ಮೂಲತಃ ಇಂಗ್ಲೀಷ್ ಪ್ರೊಫೆಸರ್ ಆಗಿದ್ದ ಜಿ.ಕೆ. ಗೋವಿಂದರಾವ್ ಕನ್ನಡದ ಮೇಲೆ ಅಪಾರ ಹಿಡಿತ ಹೊಂದಿದ್ದರು. ಕನ್ನಡದಲ್ಲಿ ಹಲವು ಕೃತಿಗಳನ್ನು ರಚಿಸಿದ್ದ ಅವರು ಬಹುಮುಖ ಪ್ರತಿಭೆ. ಸಾಹಿತ್ಯದ ಜೊತೆಜೊತೆಗೆ ನಾಟಕ ರಂಗದಲ್ಲೂ ಜಿ.ಕೆ. ಗೋವಿಂದರಾವ್ ಸಕ್ರಿಯರಾಗಿದ್ದರು. ಮಾಲ್ಗುಡಿ ಡೇಸ್, ಮಹಾಪರ್ವ ಧಾರಾವಾಹಿ ಸೇರಿದಂತೆ ಹಲವಾರು ಧಾರವಾಹಿಗಳಲ್ಲಿ ಹಾಗೂ ಚಲನಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು. ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಜಿ.ಕೆ. ಗೋವಿಂದ ರಾವ್ ತಮ್ಮ ಇಳಿ ವಯಸ್ಸಿನಲ್ಲೂ ರಂಗ ಚಟುವಟಿಕೆ ಮತ್ತು ಹೋರಾಟದಲ್ಲಿ ಸಕ್ರಿಯರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆ ಮಾಡಿರುವ ಜಿ.ಕೆ. ಗೋವಿಂದ ರಾವ್, ಈಶ್ವರ ಅಲ್ಲಾ ಎಂಬ ಕಿರು ಕಾದಂಬರಿ, ಶೇಕ್ಸ್ಪೀಯರ್ ನಾಟಕ ಅಧ್ಯಯನ, ಶೇಕ್ಸ್ಪೀಯರ್ ಸಂವಾದ ಲೇಖನ ಮಾಲಿಕೆ, ನಡೆ ನುಡಿ ನಾಗರಿಕತೆ, ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್ ಮುಂತಾದ ಹಲವು ಕೃತಿಗಳನ್ನು ಬರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಳವಳಿಯಲ್ಜಿಲೂ ಮುಂಚೂಣಿಯಲ್ಲಿದ್ದ ಜಿ.ಕೆ. ಗೋವಿಂದರಾವ್ ಹೋರಾಟದ ಕ್ಷೇತ್ರದಲ್ಲಿ ಜಿಕೆಜಿ ಎಂದೇ ಚಿರಪರಿಚಿತರು. ಮಾನವ ಹಕ್ಕು ಉಲ್ಲಂಘನೆ, ಪ್ರಭುತ್ವದ ದೌರ್ಜನ್ಯ, ಅನ್ಯಾಯ ಅಕ್ರಮಗಳು ಎಲ್ಲೇ ನಡೆದರೂ ಜಿಕೆಜಿ ಹೋರಾಟ ಅಲ್ಲಿ ದಾಖಲಾಗುತ್ತಿತ್ತು. ಎಡಪಂಥೀಯ ಚಿಂತಕರ ಜೊತೆ ಗುರುತಿಸಿಕೊಂಡಿದ್ದ ಜಿ.ಕೆ. ಗೋವಿಂದ ರಾವ್ ಪ್ರಗತಿಪರ ಹೋರಾಟಗಾರರಾಗಿದ್ದರು.

ಇಂದು ಮುಂಜಾನೆ ಜಿ.ಕೆ. ಗೋವಿಂದರಾವ್ ನಿಧನರಾಗಿದ್ದರಿಂದ ಸಾಹಿತ್ಯ, ರಂಗಚಟುವಟಿಕೆ, ಸಿನಿಮಾ, ಪ್ರಗತಿಪರ ವಲಯಕ್ಕೆ ತುಂಬಲಾರದ ನಷ್ಟ. ಜಿಕೆಜಿ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.