Friday, January 24, 2025
ಬಂಟ್ವಾಳ

ಶ್ರೀರಾಮ ಶಿಶುಮಂದಿರದ ವತಿಯಿಂದ ವೇದವ್ಯಾಸ ಧ್ಯಾನಮಂದಿರದಲ್ಲಿ ವಿದ್ಯಾರಂಭ ಕಾರ್ಯಕ್ರಮ- ಕಹಳೆ ನ್ಯೂಸ್

ಕಲ್ಲಡ್ಕ : ನವರಾತ್ರಿಯ ವಿಜಯದಶಮಿ ದಿನದಂದು ಶ್ರೀರಾಮ ಶಿಶುಮಂದಿರದ ವತಿಯಿಂದ ವೇದವ್ಯಾಸ ಧ್ಯಾನಮಂದಿರದಲ್ಲಿ ವಿದ್ಯಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸರಸ್ವತಿ ಹೋಮದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಒಡಿಯೂರು ಕ್ಷೇತ್ರದ ಪರಮ ಪೂಜನೀಯ ಸಾಧ್ವಿ ಮಾತನಂದಮಯಿಯವರು ಶ್ರೀರಾಮ ವಿದ್ಯಾಕೇಂದ್ರದ ಆಶ್ರಯದಲ್ಲಿ ನಡೆಯುವಂತಹ 5 ಶಿಶುಮಂದಿರಗಳ ಒಟ್ಟು 52 ಮಕ್ಕಳಿಗೆ ಮಗುವಿನ ಕೈಯಲ್ಲಿ ಅರಶಿನ ಕೊಂಬನ್ನು ಹಿಡಿದು ಹರಿವಾಣದಲ್ಲಿ ಅಕ್ಕಿಯ ಮೇಲೆ ಅಕ್ಷರಗಳನ್ನು ಬರೆಸುವುದರ ಮೂಲಕ ಅಕ್ಷರಾಭ್ಯಾಸ ಮಾಡಿಸಿ ಶುಭ ಹಾರೈಸಿ ಆಶೀರ್ವಚನ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ವಿವೇಕಾನಂದ ವಿಧ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಸಂಚಾಲಕರಾದ ವಸಂತ ಮಾಧವ, ರಮೇಶ್ ಶ್ರೀಮಾನ್, ಡಾ.ಕಮಲಾ ಪ್ರಭಾಕರ ಭಟ್, ಹಾಗೂ ಎಲ್ಲಾ ವಿಭಾಗದ ಪ್ರಮುಖರೂ, ಆಡಳಿತ ಮಂಡಳಿ ಸದಸ್ಯರು, ಅಧ್ಯಾಪಕರು, ಅಧ್ಯಾಪಕತೇರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಭಗಿನಿ ಪೂರ್ಣಿಮಾ ನಿರೂಪಿಸಿ, ಭಗಿನಿ ದಿವ್ಯಾ ಸ್ವಾಗತಿಸಿ, ಭಗಿನಿ ಪವ್ಯಾ ವಂದಿಸಿದರು