Friday, January 24, 2025
ಸುದ್ದಿ

ಶಿರಾಡಿಘಾಟ್‍ನಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಪಲ್ಟಿ: ಚಾಲಕ ಸ್ಥಳದಲ್ಲೇ ಸಾವು : ಕ್ಲೀನರ್ ಕಾಲು ಕಟ್-ಕಹಳೆ ನ್ಯೂಸ್

ಹಾಸನ: ಸಿಮೆಂಟು ಹೇರಿಕೊಂಡಿದ್ದ ಲಾರಿಯೊಂದು ರಸ್ತೆ ಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಸಕಲೇಶಪುರ ಶಿರಾಡಿಘಾಟ್ ಮಾರನಹಳ್ಳಿ ಬಳಿ ನಡೆದಿದೆ. ಗೌರಿಬಿದನೂರು ಮೂಲದವರಾದ ಮಂಜುನಾಥ್, ಮೃತ ದುರ್ದೈವಿ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಅಪಘಾತದಲ್ಲಿ ಲಾರಿಯಲ್ಲಿದ್ದ ಕ್ಲೀನರ್ ಕಾಲು ತುಂಡಾಗಿದ್ದು, ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಸಕಲೇಶಪುರ ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆಯ ಕುರಿತು ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.