23.5 ಲಕ್ಷ ರೂಪಾಯಿ ಅನುದಾನದಲ್ಲಿ ಮೂಲಭೂತ ಸೌಕರ್ಯ ಮತ್ತು ಆವರಣಗೋಡೆ ನಿರ್ಮಾಣಕ್ಕೆ ಗುದ್ದಲಿಪೂಜೆ – ಅದ್ಯಪಾಡಿ ಗ್ರಾಮದ ಕೊಲ್ಲೊಟ್ಟು -ಡ್ಯಾಮ್ ರಸ್ತೆ ಲೋಕಾರ್ಪಣೆ – ಕಹಳೆ ನ್ಯೂಸ್
23.5 ಲಕ್ಷ ರೂಪಾಯಿ ಅನುದಾನದಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಪಂಗಡ ಕಾಲೋನಿಯ ಶಾಂತಿ ಮತ್ತು ನವೀನ್ ರವರ ಮನೆಯ ಬಳಿ ಮೂಲಭೂತ ಸೌಕರ್ಯ ಮತ್ತು ಆವರಣಗೋಡೆ ನಿರ್ಮಾಣಕ್ಕೆ ಗುದ್ದಲಿಪೂಜೆ ಮತ್ತು ಅದ್ಯಪಾಡಿ ಗ್ರಾಮದ ಕೊಲ್ಲೊಟ್ಟು -ಡ್ಯಾಮ್ ರಸ್ತೆಯನ್ನು ಶಾಸಕರಾದ ಡಾ ಭರತ್ ವೈ ಶೆಟ್ಟಿಯವರು ಭಾನುವಾರ ಲೋಕಾರ್ಪಣೆಗೊಳಿಸಿದರು.
ಪಂಚಾಯತ್ ಅಧ್ಯಕ್ಷ ಉಮೇಶ್ ಕುಲಾಲ್, ಸದಸ್ಯರುಗಳಾದ ಸುದರ್ಶನ್,ಶಾಲಿನಿ,ಕವಿತಾ, ರಮೇಶ್, ನಾಗೇಶ್ ಕುಲಾಲ್,ಶಾಂಭವಿ ಉದಯ ರಾವ್, ಪಕ್ಷದ ಪ್ರಮುಖರಾದ ಶಿವಪ್ಪ ಬಂಗೇರ, ಸುಕೇಶ್ ಮಾಣೈ, ಪ್ರವೀಣ್ ಶೆಟ್ಟಿ, ತುಕಾರಾಂ ಶೆಟ್ಟಿ,ಮಿಥುನ್,ಶೋಧನ್ ಆದ್ಯಪಾಡಿ,ಭೋಜ ಬಂಗೇರ, ಚಂದ್ರಹಾಸ ಶೆಟ್ಟಿ,ಜಯರಾಮ ಪೂಜಾರಿ,ಸುಧಾಕರ್ ಕೊಳಂಬೆ,ಸೋಹನ್ ಅತಿಕಾರಿ, ರಾಜೇಶ್ ಗುರುಪುರ,ನವೀನ್, ದಿನೇಶ್, ಭರತ್ , ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪ್ರಮುಖರಾದ ಚಂದ್ರಹಾಸ ದೇವಾಡಿಗ, ರಜನಿಕಾಂತ್, ಹಾಗೂ ಪಕ್ಷದ ಕಾರ್ಯಕರ್ತರು, ಸ್ಥಳೀಯ ಭಾಗದ ಜನರು ಉಪಸ್ಥಿತರಿದ್ದರು.