ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶ್ರೀರಾಮ ಪ್ರಾಥಮಿಕ ಶಾಲೆಯ ಅಧ್ಯಾಪಕರಿಗೆ “ಶಿಕ್ಷಕ ಪ್ರಶಿಕ್ಷಣ ” ಎಂಬ ನಾಲ್ಕು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭ- ಕಹಳೆ ನ್ಯೂಸ್
ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರದ ಪ್ರೇರಣಾ ಸಭಾಭವನದಲ್ಲಿ ಶ್ರೀರಾಮ ಪ್ರಾಥಮಿಕ ಶಾಲೆಯ ಅಧ್ಯಾಪಕರಿಗೆ “ಶಿಕ್ಷಕ ಪ್ರಶಿಕ್ಷಣ ” ಎಂಬ ನಾಲ್ಕು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ನಡೆಯಿತು
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡುತ್ತಾ ಶಾಲೆ ನಡೆದು ಬಂದ ದಾರಿಯ ಬಗ್ಗೆ ತಿಳಿಸುತ್ತಾ ಶಾಲೆ ಸ್ಥಾಪನೆಯ ಹಿಂದಿನ ಪರಿಶ್ರಮ ಹಾಗೂ ಬೆಳೆದ ರೀತಿಯ ಬಗ್ಗೆ ಪ್ರಶಿಕ್ಷಣಾರ್ಥಿಗಳಿಗೆ ವಿವರಿಸಿದರು. “ಶಾಲೆಯು ಉನ್ನತ ಮಟ್ಟಕ್ಕೆ ಬೆಳೆಯಲು ಸಂಸ್ಕಾರಯುತ ಶಿಕ್ಷಣವು ಒಂದು ಭಾಗವಾಗಿದೆ. ಪ್ರತಿಯೊಬ್ಬ ಶಿಕ್ಷಕರು ಕೂಡ ಪ್ರಯತ್ನ ಮತ್ತು ಪರಿಶ್ರಮದಿಂದ ಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಎತ್ತರಿಸುವ ಕೆಲಸ ನಿರಂತರವಾಗಿ ಆಗಬೇಕು. ಈ ಪ್ರಶಿಕ್ಷಣ ಕಾರ್ಯಗಾರವನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಹೇಳಿದರು.”
ಮೊದಲ ದಿನ ಕನ್ನಡ ಹಾಗೂ ಇಂಗ್ಲೀಷ್ ಕಾರ್ಯಗಾರ ನಡೆಯಿತು. ಇಂಗ್ಲೀಷ್ ಕಾರ್ಯಗಾರವನ್ನು ಆಂಗ್ಲಭಾಷಾ ತರಬೇತುದಾರರಾದ ರಾಮಚಂದ್ರ ಭಟ್ , ಕನ್ನಡ ಕಾರ್ಯಗಾರವನ್ನು ಸುಜೀರು ಪ್ರೌಢಶಾಲೆಯ ಶಿಕ್ಷಕರಾದ ಜಯಪ್ರಕಾಶ್ ನಡೆಸಿಕೊಟ್ಟರು.
ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ರಾಷ್ಟ್ರಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯರಾದ ಕಮಲ ಪ್ರಭಾಕರ್ ಭಟ್, ಶ್ರೀರಾಮ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಸಾಲ್ಯಾನ್ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನ ಶಿಕ್ಷಕರಾದ ವೇದಾವತಿ ಸ್ವಾಗತಿಸಿ, ಸುಮಂತ್ ಆಳ್ವ ನಿರೂಪಿಸಿ, ಚಂದ್ರಕಲಾ ವಂದಿಸಿದರು