Thursday, January 23, 2025
ಸುದ್ದಿ

ಮೀನಿನ ಉತ್ಪನ್ನಗಳ ರಫ್ತು ಹೆಚ್ಚಳ – ಮೀನುಗಾರರ ಆರ್ಥಿಕ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಬದ್ಧ – ಕೇಂದ್ರ ಮೀನುಗಾರಿಕೆ ರಾಜ್ಯ ಸಚಿವ ಮುರುಗನ್ – ಕಹಳೆ ನ್ಯೂಸ್

ಮಂಗಳೂರು: ಮೀನುಗಾರಿಕೆಗೆ ಉತ್ತೇಜನ ನೀಡುವ ಮೂಲಕ ಮೀನುಗಾರರ ಆರ್ಥಿಕ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಮೀನುಗಾರಿಕೆ ರಾಜ್ಯ ಸಚಿವ ಮುರುಗನ್ ಹೇಳಿದರು.

ಮಂಗಳೂರಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಆರಂಭಿಸಿದೆ. ಇದರಡಿ ಮೀನುಗಾರಿಕೆ, ಬಂದರು, ಸಂಸ್ಕರಣೆ, ಶೀತಲೀಕರಣ ಘಟಕಗಳ ಅಭಿವೃದ್ಧಿ ಮಾಡುವ ಮೂಲಕ ಮೀನಿನ ಉತ್ಪನ್ನಗಳ ರಫ್ತು ಹೆಚ್ಚಳಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಸಮುದ್ರ ಕಳೆ ಬೆಳೆಯುವ ಮೂಲಕ ಮೀನುಗಾರ ಮಹಿಳೆಯರಿಗೂ ಆರ್ಥಿಕ ಸ್ವಾವಲಂಬನೆ ನೀಡಲಾಗುವುದು. ಔಷಧಿ, ಆಹಾರ ಸಂಸ್ಕರಣೆ, ರಸಗೊಬ್ಬರಗಳಲ್ಲಿ ಸಮುದ್ರ ಕಳೆ ಬಳಕೆ ಆಗುತ್ತಿದ್ದು, ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಿದರು. ಈಗಾಗಲೆ ಕೊಚ್ಚಿನದಲ್ಲಿ ವಿಶೇಷ ಆರ್ಥಿಕ ವಲಯದಲ್ಲಿ ಸೀವೀಡ್ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅನುಮೋದನೆ ದೊರೆತ ತಕ್ಷಣ ಕೆಲಸ ಆರಂಭವಾಗಲಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು