Thursday, January 23, 2025
ಬೆಳ್ತಂಗಡಿ

2022 – 2023 ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಗೆ ಬಂದಾರು ಗ್ರಾಮಸ್ಥರಿಂದ ಅರ್ಜಿ ಆಹ್ವಾನಕ್ಕೆ ಕರೆ- ಕಹಳೆ ನ್ಯೂಸ್

ಬಂದಾರು: ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಬಂದಾರು ಗ್ರಾಮದ ಕೃಷಿಕರು ಸದುಪಯೋಗವನ್ನು ಪಡೆದುಕೊಂಡು ಮಹತ್ತರ ಕಾರ್ಯ ಮಾಡಿದ್ದಾರೆ. ಸುಮಾರು 47ಲಕ್ಷ ಮೊತ್ತದ ಹಣವನ್ನು ಬಂದಾರು ಪಂಚಾಯತ್ ವ್ಯಾಪ್ತಿಯ ಕೃಷಿಕರು ಪಡೆದುಕೊಂಡು, ತಾಲೂಕಿನಲ್ಲಿ ಮಹಾತ್ಮ ಗಾಂಧಿ ಯೋಜನೆಯ ಅನುಷ್ಠಾನದಲ್ಲಿ ಬಂದಾರು ಗ್ರಾಮ ಮೊದಲ ಸ್ಥಾನ ಪಡೆದುಕೊಳ್ಳುವಂತೆ ಮಾಡಿದ್ದಾರೆ.

2020-2021ಸಾಲಿನ ಉದ್ಯೋಗ ಖಾತರಿ ಯೋಜನೆಯ ಅರ್ಜಿ ಸ್ವೀಕಾರ ಪಂಚಾಯತ್‍ನಲ್ಲಿ ನಿಲ್ಲಿಸಲಾಗಿದ್ದು, 2022 – 2023ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಗೆ ಅರ್ಜಿ ಕೊಡುವ ಮೈರೋಳ್ತಡ್ಕ- 2 ನೇ ವಾರ್ಡಿನವರು ಅಕ್ಟೋಬರ್ 22 ರಂದು ಶುಕ್ರವಾರದಂದು ಬೆಳಗ್ಗೆ 10.00 ಗಂಟೆಗೆ, ಸ.ಹಿ.ಪ್ರಾ.ಶಾಲೆ ಮೈರೋಳ್ತಡ್ಕದಲ್ಲಿ ಅರ್ಜಿ ನೀಡಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೈರೋಳ್ತಡ್ಕ ವಾರ್ಡಿನ ಎಲ್ಲ ಕೃಷಿಕರೂ ಅರ್ಜಿ, RTC , ಉದ್ಯೋಗ ಖಾತ್ರಿ ಬುಕ್ ಜೆರಾಕ್ಸ್, ಆಧಾರ್ ನ ಝೆರಾಕ್ಸ್, ರೇಷನ್ ಕಾರ್ಡ್ ಜೆರಾಕ್ಸ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ಪ್ರಸ್ತುತ ಮನೆ ತೆರಿಗೆ ರಶೀದಿ ಜೆರಾಕ್ಸ್ ಮತ್ತು APL card ಹೊಂದಿದವರು ಸಣ್ಣ ರೈತ ದಾಖಲೆ ಮಾಡಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು