Saturday, November 23, 2024
ಸುದ್ದಿ

ಬಹುಮುಖ ಪ್ರತಿಭೆ ರಶ್ಮಿ ಸನಿಲ್ ಅವರಿಗೆ “ಸೌರಭ ರತ್ನ” ರಾಜ್ಯ ಪ್ರಶಸ್ತಿ- ಕಹಳೆ ನ್ಯೂಸ್

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕುಡ್ಲ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕಥಾ ಬಿಂದು ಪ್ರಕಾಶನ ಮಂಗಳೂರು ಹಾಗೂ ಕಲ್ಕೂರ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಮಂಗಳೂರಿನ ಉರ್ವಸ್ಟೋರ್ ತುಳು ಭವನದಲ್ಲಿ ನಡೆದ ತುಳು, ಕನ್ನಡ ಸಾಹಿತ್ಯೋತ್ಸವದಲ್ಲಿ ಕವಯಿತ್ರಿ, ನಿರೂಪಕಿ, ನೃತ್ಯಗಾರ್ತಿ, ಹಾಡುಗಾರ್ತಿ , ಬಹುಮುಖ ಪ್ರತಿಭೆಯಾದ ರಶ್ಮಿ ಸನಿಲ್ ಅವರಿಗೆ “ಸೌರಭ ರತ್ನ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ ಕತ್ತಲ್‍ಸಾರ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಡಾ|| ಆಕಾಶ್ ರಾಜ್ ಜೈನ್, ನರೇಶ್ ಕೆರೆಕಾಡು, ಕಥಾ ಬಿಂದು ಪ್ರಕಾಶನದ ರುವಾರಿ ಪಿ.ವಿ. ಪ್ರದೀಪ್ ಕುಮಾರ್, ಡಾ|| ಸುರೇಶ್ ನೆಗಳಗುಳಿ, ಡಾ|| ರಜನಿ ವಿ. ಪೈ, ಖ್ಯಾತ ಲೆಕ್ಕ ಪರಿಶೋಧಕ ಸಿಎ ಎಸ್. ಎಸ್ ನಾಯಕ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ಫೋಸಿಸ್ ಸಂಸ್ಥೆಯಲ್ಲಿ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರಶ್ಮಿ ಸನಿಲ್ ಅವರು, ಕನ್ನಡ ತುಳು ಭಾμÉಯಲ್ಲಿ ಹಿಡಿತವನ್ನು ಹೊಂದಿದ್ದು ನೂರಾರು ಕವನ ರಚಿಸಿ ಮನೆ ಮಾತಾದವರು, ಕವಿಗೋಷ್ಠಿಗಳಲ್ಲಿ ಪ್ರೌಢಿಮೆ ತೋರಿರುವ ಇವರು ತನ್ನ ಕವನಗಳಿಗಾಗಿ 100 ಕ್ಕೂ ಅಧಿಕ ಬಹುಮಾನ ಪಡೆದುಕೊಂಡವರು, ಲೇಖಕಿಯಾಗಿ, ಬರಹಗಾರ್ತಿಯಾಗಿ, ನೃತ್ಯಪಟುವಾಗಿ, ನಿರೂಪಕಿಯಾಗಿಯೂ ಮಿಂಚಿದ ಇವರು ಯುವವಾಹಿನಿ, ರೋಟರಿ, ಮಹಿಳಾ ಮಂಡಳಿ (ರಿ) ಕೊಲ್ಯ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯೆಯಾಗಿ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ (ರಿ) ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ತಮ್ಮ ಪಾತ್ರ ನಿರ್ವಹಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು