Sunday, January 19, 2025
ಪುತ್ತೂರು

ಅಕ್ಷಯ ಕಾಲೇಜಿನಲ್ಲಿ ಶಿಕ್ಷಕ ಹಾಗೂ ಹೆತ್ತವರ ಸಂಘದ ವತಿಯಿಂದ ನೂತನವಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಅವರ ಹೆತ್ತವರಿಗೆ ಮಾಹಿತಿ ಕಾರ್ಯಾಗಾರ- ಕಹಳೆ ನ್ಯೂಸ್

ಪುತ್ತೂರು: ಅಕ್ಷಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಅ.21ರಂದು ಶಿಕ್ಷಕ ಹಾಗೂ ಹೆತ್ತವರ ಸಂಘದ ವತಿಯಿಂದ ನೂತನವಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಹಾಗೂ ಅವರ ಹೆತ್ತವರಿಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು.

ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಶ್ರೀ ಜಯಂತ್ ನಡುಬೈಲು, ದೀಪ ಪ್ರಜ್ವಲಿಸಿ, ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಪಕ್ಕಳ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನಾಡುತ್ತಾ ವಿದ್ಯಾರ್ಥಿಗಳಿಗೆ ಕಾಲೇಜಿನ ಚಟುವಟಿಕೆ, ನಿಯಮಾವಳಿಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

     

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಫ್ಯಾಶನ್ ಡಿಸೈನ್ ಹಾಗೂ ಇಂಟೀರಿಯರ್ ಡಿಸೈನ್ ಡೆಕೋರೇಶನ್ ಮತ್ತು ಬಿಕಾಂ ಎವೀಯೇಶನ್ ಹಾಸ್ಪಿಟಲಿಟಿ ಮ್ಯಾನೇಮೆಂಟ್ ಕೋರ್ಸ್‍ಗಳ ಹಾಗೂ ಕಾಲೇಜಿನ ವ್ಯವಸ್ಥೆಯ ವಿವರಗಳನ್ನು ಉಪಾನ್ಯಾಸಕರು ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ, ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ್ ನಡುಬೈಲುರವರು ಮಾತಾನಾಡಿ ನೂತನ ಕ್ಯಾಂಪಸ್‍ಗೆ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ನೂತನ ವಿದ್ಯಾರ್ಥಿಗಳಲ್ಲಿ ಪ್ರಥಮ ವರ್ಷದಲ್ಲಿ 90% ಅಂಕ ಪಡೆದವರಿಗೆ ಉಚಿತವಾದ ಶಿಕ್ಷಣ ನೀಡುವುದಾಗಿ ಹೇಳಿದರು. ಮುಂದಿನ ವರ್ಷ ಇನ್ನೂ ಹೊಸ ಹೊಸ ವೃತ್ತಿಪರ ಕೋರ್ಸಗಳನ್ನು ಆರಂಭಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿಯಾದ ಅರ್ಪಿತ್ ಟಿ.ಎ. ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಪ್ರಿಯಾ ವಂದಿಸಿದರು. ಫ್ಯಾಶನ್ ಡಿಸೈನ್ ಉಪನ್ಯಾಸಕಿ ಸಹನಾ ಮ್ಯಾಥ್ಯೂ ಕಾರ್ಯಕ್ರಮವನ್ನು ನಿರೂಪಿಸಿದರು.