Sunday, January 19, 2025
ಪುತ್ತೂರುಸಂತಾಪ

ಇಹಲೋಕ ತ್ಯಜಿಸಿದ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ನ ಪ್ರಥಮಾಧ್ಯಕ್ಷ ಅಲಿಮಾರ ವಿಶ್ವನಾಥ ರೈ- ಕಹಳೆ ನ್ಯೂಸ್

ಪುತ್ತೂರು : 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್‍ನ ಪ್ರಥಮ ಅಧ್ಯಕ್ಷ, ಕೋಡಿಂಬಾಡಿಯ ಮಾಜಿ ಮಂಡಲ ಪಂಚಾಯತ್ ಸದಸ್ಯ ಅಲಿಮಾರ ವಿಶ್ವನಾಥ ರೈ ಅ.21ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಅಲಿಮಾರ ಕರಿಯಪ್ಪ ರೈ-ಅಬ್ಬಕ್ಕೆ ದಂಪತಿಯ ಮಗ ಅಲಿಮಾರ ವಿಶ್ವನಾಥ ರೈಯವರು ಧಾರ್ಮಿಕ, ರಾಜಕೀಯ, ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಊರಿನ ಅಭಿವೃದ್ಧಿಗೆ ಶ್ರಮಿಸಿದ್ದವರು. ಕೋಡಿಂಬಾಡಿ ಮಂಡಲ ಪಂಚಾಯತ್ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ್ದ ವಿಶ್ವನಾಥ ರೈ ಯವರು 34ನೇ ನಕ್ಕಿಲಾಡಿ ಪ್ರತ್ಯೇಕ ಗ್ರಾಮ ಪಂಚಾಯತ್ ಗಾಗಿ ಹೋರಾಟ ಮಾಡಿ ಯಶಸ್ಸು ಸಾಧಿಸಿದ್ದರಲ್ಲದೆ ಗ್ರಾಮ ಪಂಚಾಯತ್‍ನ ಪ್ರಥಮ ಅಧ್ಯಕ್ಷರಾಗಿ ಸುಮಾರು 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.ಈ ಸಂದರ್ಭ ನೆಕ್ಕಿಲಾಡಿಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಕಾರಣಕರ್ತರಾಗಿದ್ದ ಇವರು ನೆಕ್ಕಿಲಾಡಿಯಲ್ಲಿ ಸಂತ ಮಾರುಕಟ್ಟೆ, ಪಂಚಾಯತ್ ಕಟ್ಟಡ, 5 ಕಡೆಗಳಲ್ಲಿ ಬಸ್ ತಂಗುದಾಣ ನಿರ್ಮಾಣ, ಸಂಪರ್ಕ ರಸ್ತೆ ನಿರ್ಮಾಣ, 5ನೇ ತರಗತಿ ತನಕ ಇದ್ದ ಶಾಲೆಯನ್ನು 7ನೇ ತರಗತಿವರೆಗೆ ವಿಸ್ತರಣೆ ಸೇರಿದಂತೆ ಹಲವು ಅಭಿವೃದ್ಧಿಗಳಿಗೆ ಕಾರಣಕರ್ತರಾಗಿದ್ದರು. ಸಹಕಾರ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದ ಅವರು ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.ಮೃತರು ಪತ್ನಿ ಜೀವನಲತಾ, ಪುತ್ರರಾದ ಪ್ರದೀಪ್ ರೈ, ಪ್ರಶಾಂತ್ ರೈ,ಮಗಳು ಪ್ರತಿಭಾ, ಅಳಿಯ ನಮೂರು ನಕ್ಕಿಲಾಡಿ ಅಧ್ಯಕ್ಷ ಜತೀಂದ್ರ ಶೆಟ್ಟಿ, ಸೊಸೆಯಂದಿರಾದ ಮಲ್ಲಿಕಾ, ಸುಮನಾ ಹಾಗೂ ಐವರು ಮೊಮ್ಮಕ್ಕಳನ್ನು ಅಗಲಿದ್ದಾರೆ.
ವಿಶ್ವನಾಥ ರೈ ಅವರ ಅಂತ್ಯ ಸಂಸ್ಕಾರವು ಅ.22ರಂದು ಮಧ್ಯಾಹ್ನ 12 ಗಂಟೆಗೆ 34 ನೆಕ್ಕಿಲಾಡಿ ಗ್ರಾಮದ ಅಲಿಮಾರ ಮನೆಯಲ್ಲಿ ನಡೆಯಲಿದೆ ಎಂದು ಮೃತರ ಮನೆಯವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು