Wednesday, April 16, 2025
ಪುತ್ತೂರು

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಪಾಕಿಸ್ಥಾನ ಹಾಗೂ ಬಾಂಗ್ಲಾ ವಿರುದ್ಧ ಪ್ರತಿಭಟನೆ- ಕಹಳೆ ನ್ಯೂಸ್

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‍ನಲ್ಲಿ ಪಾಕಿಸ್ಥಾನ ಹಾಗೂ ಬಾಂಗ್ಲಾ ವಿರುದ್ಧ ಪ್ರತಿಭಟನೆ ನಡೆಯಿತು.

ಬಾಂಗ್ಲಾದಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ಭಯೋತ್ಪಾದಕ ದಾಳಿ ಹಾಗೂ ಕಾಶ್ಮೀರದಲ್ಲಿ ನಡೆಯುತ್ತಿರುವ ಪಾಕಿಸ್ಥಾನ ಪ್ರೇರಿತ ದಾಳಿಗಳ ವಿರುದ್ಧ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಪ್ರತಿಭಟಿಸಿದರು. ಎರಡೂ ರಾಷ್ಟ್ರಗಳ ಧ್ವಜವನ್ನು ಉರಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ಕಾರ್ತಿಕ್ ಕೆದಿಮಾರು ಮಾತನಾಡಿ ದೇಶ ಮತ್ತು ಭಾವನೆಗೆ ಧಕ್ಕೆ ತಂದಾಗ ಸುಮ್ಮನಿರುವುದಕ್ಕೆ ಮನಸ್ಸೊಪ್ಪುವುದಿಲ್ಲ. ಇಂದು ಬಾಂಗ್ಲಾದಲ್ಲಿ ಅಥವ ಪಾಕಿಸ್ಥಾನ ಪ್ರೇರಿತವಾಗಿ ಕಾಶ್ಮೀರದಲ್ಲಿ ನಡೆಯುತ್ತಿರುವ ಅನಾಚಾರಗಳ ಬಗೆಗೆ ಪುತ್ತೂರಿನಂತಹ ಪ್ರದೇಶಗಳಲ್ಲೂ ಧ್ವನಿ ಎತ್ತಲೇಬೇಕಿದೆ. ಇಲ್ಲದಿದ್ದರೆ ಇಂತಹ ದುರ್ಘಟನೆಗಳು ದೇಶದೊಳಗೆ ಮತ್ತಷ್ಟು ವ್ಯಾಪಿಸುವುದರಲ್ಲಿ ಸಂದೇಹವಿಲ್ಲ. ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಯಾರೇ ಮಾಡಿದರೂ ಅದನ್ನು ಎದುರಿಸುವುದಕ್ಕೆ ಯುವಸಮೂಹ ಸದಾ ಸನ್ನದ್ಧವಾಗಿರಬೇಕು ಎಂದು ಕರೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮತ್ತೋರ್ವ ವಿದ್ಯಾರ್ಥಿ ಮುಖಂಡ ಮನೀಶ್ ಮಾತನಾಡಿ ಕಾಶ್ಮೀರ ನಮ್ಮ ದೇಶದ ಶಿರ. ಅಲ್ಲಿಗೆ ಯಾರಾದರೂ ಹಾನಿಮಾಡಿದರೆ ನಮ್ಮ ತಲೆಗೇ ಹೊಡೆದ ಅನುಭವವಾಗುತ್ತದೆ. ಬಾಂಗ್ಲಾದೇಶ ಸ್ವಂತ ದೇಶವನ್ನು ಹೊಂದಿದ್ದೇ ಭಾರತದಿಂದಲಾಗಿ ಎನ್ನುವುದನ್ನು ಮರೆಯಬಾರದು. ಹೀಗಿರುವಾಗ ಭಾರತದ ಬಗ್ಗೆ ಕೃತಜ್ಞರಾಗಿರುವುದು ಬಿಟ್ಟು ಭಾರತದ ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ಎಸಗುತ್ತಿದೆ. ನೂರಮೂವತ್ತು ಕೋಟಿ ಇರುವ ಭಾರತದ ಜನಸಂಖ್ಯೆ ಸುಮ್ಮನೇ ನಡೆದುಹೋದರೂ ಕಾಲ್ತುಳಿತಕ್ಕೆ ಸಿಕ್ಕಿ ಅವನತಿ ಕಾಣಬಹುದಾದ ಬಾಂಗ್ಲಾ ಪಾಕಿಸ್ಥಾನದಂತಹ ದೇಶಗಳು ಭಾರತೀಯರ ಸಹನೆಯನ್ನು ಪರೀಕ್ಷಿಸುವ ಹುಂಬತನಕ್ಕೆ ಅಡಿಯಿಡಬಾರದು ಎಂದು ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ನಾಯಕರುಗಳಾದ ಶ್ರೀಕೃಷ್ಣ ಎಸ್ ನಟ್ಟೋಜ, ಪ್ರವರ್ಧನ್, ಇಶಾನ್, ಸುಧಾ ಕೋಟೆ ಪ್ರತಿಭಟನಾತ್ಮಕ ಮಾತುಗಳನ್ನಾಡಿದರು. ವಿದ್ಯಾರ್ಥಿ ಮುಖಂಡರುಗಳಾದ ಸಾಯಿಶ್ವೇತ, ಪ್ರೀತಲ್, ಮೋಹಿತ್ ಕೆ.ಎಸ್, ಆರ್ಯ ಹಿಮಾಲಯ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ