Tuesday, January 21, 2025
ಬೆಳ್ತಂಗಡಿ

ಕಣಿಯೂರು : ಆರೋಗ್ಯ ಇಲಾಖಾ ಅಧಿಕಾರಿಗಳಿಗೆ ಗೌರವಾರ್ಪಣಾ ಕಾರ್ಯಕ್ರಮ – ಕಹಳೆ ನ್ಯೂಸ್

ಪದ್ಮುಂಜ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ, ದೇಶದಲ್ಲಿ 100 ಕೋಟಿಗೂ ಅಧಿಕ ವ್ಯಾಕ್ಸಿನೇಷನ್ ಉಚಿತವಾಗಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರಿಗೆ ಕಣಿಯೂರು ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುವಲ್ಲಿ ಶ್ರಮಿಸಿದ ಆರೋಗ್ಯ ಇಲಾಖಾ ವೈದ್ಯರಿಗೆ, ಆರೋಗ್ಯ ಕಾರ್ಯಕರ್ತೆಯರಿಗೆ, ಆಶಾಕಾರ್ಯಕರ್ತೆಯರಿಗೆ ಗೌರವಾರ್ಪಣಾ ಕಾರ್ಯಕ್ರಮ ವು ಕಣಿಯೂರು ಸಮುದಾಯ ಆಸ್ಪತ್ರೆಯಲ್ಲಿ ನಡೆಯಿತು


42ಆಶಾ ಕಾರ್ಯಕರ್ತೆಯರು, ಹಾಗೂ 12 ಆರೋಗ್ಯ ಕೇಂದ್ರದ ಸಿಬ್ಬಂದಿಗಳನ್ನು ಹಾಗೂ ಆರೋಗ್ಯ ಸಂರಕ್ಷಣಾಧಿಕಾರಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಣಿಯೂರು ಸಮುದಾಯ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾದ ಡಾ| ಡಯಾನಾ ಸವಿತಾ, ಮಹಾಶಕ್ತಿ ಅಧ್ಯಕ್ಷರಾದ ಜಯಾನಂದ ಕಲ್ಲಾಪು, ಪ್ರಧಾನ ಕಾರ್ಯದರ್ಶಿಗಳಾದ ಬಾಲಕೃಷ್ಣ ಗೌಡ ಮುಗೇರಡ್ಕ, ಮಂಡಲ ಉಪಾಧ್ಯಕ್ಷರಾದ ಸೀತಾರಾಮ ಬೆಳಾಲು, ಕೃಷ್ಣಯ್ಯ ಆಚಾರ್ಯ, ಮಹಾಬಲ ಗೌಡ, ಸಿ.ಎ ಬ್ಯಾಂಕ್ ನಿರ್ದೇಶಕರಾದ ನಾರಾಯಣ ಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗಾಯತ್ರಿ, ಶ್ರೀಮತಿ ಶಾರದಾ ರೈ, ದಯಾನಂದ್ ಅಳ್ವ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು