Recent Posts

Tuesday, January 21, 2025
ಬಂಟ್ವಾಳ

ಅಧ್ಯಾಪಕ ರಕ್ಷಕ ಪ್ರಶಿಕ್ಷಣ ಕಾರ್ಯಗಾರದ ಸಮಾರೋಪ ಸಮಾರಂಭ – ಕಹಳೆ ನ್ಯೂಸ್

ಕಲ್ಲಡ್ಕ : ಅಧ್ಯಾಪಕ ರಕ್ಷಕ ಪ್ರಶಿಕ್ಷಣ ಕಾರ್ಯಗಾರದ ಸಮಾರೋಪ ಸಮಾರಂಭವು ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರೇರಣಾ ಸಭಾಭವನದಲ್ಲಿ ನಡೆಯಿತು. ಖ್ಯಾತ ಪಶುವೈದ್ಯರು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾದ ಡಾ. ಕೃಷ್ಣಭಟ್ ಕೊಂಕೋಡಿ ಮಾತನಾಡುತ್ತಾ, ಕೊರೋನದ ರಜೆಯಿಂದಾಗಿ ಜಡ ಹಿಡಿದಿರುವ ವಿದ್ಯಾರ್ಥಿಗಳ ಮನಸ್ಸನ್ನು ಚಟುವಟಿಕೆಯಾಧಾರಿತ ಶಿಕ್ಷಣದ ಮೂಲಕ ಮತ್ತೆ ಚೈತನ್ಯಗೊಳಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸನ್ನು ಪ್ರೀತಿಯ ಸಂವೇದನೆಯ ಮೂಲಕ ಹೇಗೆ ನೆನಪಿನಲ್ಲಿಡುವಂತೆ ಮಾಡಬಹುದು ಎಂಬುದನ್ನು ತಮ್ಮ ಅನುಭವಗಳನ್ನು ಉದಾಹರಣೆಯಾಗಿಸುತ್ತ ವಿವರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಗಾರದ ಚಿಂತನ ಅವಧಿಯನ್ನು ಶಿಕ್ಷಣದಲ್ಲಿ ಭಾರತೀಯತೆ ವಿಚಾರವಾಗಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತಮಾಧವ, ಸಂಸ್ಕಾರದಲ್ಲಿ ವ್ಯಕ್ತಿತ್ವ ವಿಕಸನ ಎಂಬ ವಿಚಾರವಾಗಿ ಕರ್ನಾಟಕ ಸರಕಾರದ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಹಾಗೂ ಭಾರತದ ಭೂಪಟ ಪರಿಚಯ ಮತ್ತು ಭಾರತ ದರ್ಶನ ಇದರ ಕುರಿತು ಶ್ರೀರಾಮ ಪದವಿಯ ಪ್ರಾಚಾರ್ಯರಾದ ಕೃಷ್ಣಪ್ರಸಾದ ಕಾಯರ್ ಕಟ್ಟೆ ಇವರು ನಡೆಸಿಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಲ್ಕು ದಿನದ ಪ್ರಶಿಕ್ಷಣ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಇಂಗ್ಲಿಷ್ ವಿಷಯವನ್ನು ಆಂಗ್ಲಭಾಷಾ ತರಬೇತುದಾರರಾದ ರಾಮಚಂದ್ರ ಭಟ್, ಕನ್ನಡ ವಿಷಯವನ್ನು ಸರ್ಕಾರಿ ಪ್ರೌಢಶಾಲೆ ನಾರ್ಶ ಇಲ್ಲಿಯ ಶಿಕ್ಷಕರಾದ ಗೋಪಾಲಕೃಷ್ಣ ಹಾಗೂ ಸುಜೀರು ಪ್ರೌಢಶಾಲೆಯ ಶಿಕ್ಷಕರಾದ ಜಯಪ್ರಕಾಶ್ ನಡೆಸಿಕೊಟ್ಟರು. ಶಿಕ್ಷಣದಲ್ಲಿ ನೈತಿಕತೆ ವಿಷಯವಾಗಿ ವಿದ್ಯಾಭಾರತಿ ಪ್ರಾಂತ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಪ್ರಮುಖರು, ವಿವೇಕಾನಂದ ಗ್ರಾಮೀಣ ಶಾಲೆಗಳ ಸಂಪರ್ಕ ಅಧಿಕಾರಿ ಹಾಗೂ ಸರಸ್ವತಿ ವಿದ್ಯಾಲಯ ಕಡಬ ಇಲ್ಲಿನ ಸಂಚಾಲಕರಾದ ವೆಂಕಟರಮಣ ಭಟ್, ಕತೆಯೊಂದಿಗೆ ಯೋಗ ಎಂಬ ವಿಷಯದ ಕುರಿತು ಶ್ರೀರಾಮ ವಿದ್ಯಾಕೇಂದ್ರದ ಯೋಗ ಶಿಕ್ಷಕರಾದ ಸಂಜಯ್ ನಡೆಸಿಕೊಟ್ಟರು. ಸಂಸ್ಕಾರದಲ್ಲಿ ಪರಿಸರ ಅಧ್ಯಯನ ವಿಷಯವಾಗಿ ಹಿಂದೂ ಸೇವಾ ಪ್ರತಿಷ್ಠಾನದ ಪೂರ್ಣಾವಧಿ ಕಾರ್ಯಕರ್ತರು ಹಾಗೂ ಮೂರುಕಜೆ ಮೈತ್ರೇಯಿ ಗುರುಕುಲದ ಮಾತಾಜಿಯಾಗಿರುವ ಸಾವಿತ್ರಿ ಹಾಗೂ ತಿರುಚಿದ ಇತಿಹಾಸ ಇದರ ಕುರಿತು ಶ್ರೀರಾಮ ಪ್ರೌಢಶಾಲೆಯ ಅಧ್ಯಾಪಕರಾದ ವಿನೋದ್ ಶೆಟ್ಟಿ ತಿಳಿಸಿಕೊಟ್ಟರು.

ಚಟುವಟಿಕೆಯ ಮೂಲಕ ವಿಜ್ಞಾನ ವಿಷಯದ ವಿವರಣೆ ಕುರಿತು ಕುಮದ್ವತಿ ಪ್ರಾಥಮಿಕ ಶಾಲೆ ಗರಥಿಕೆರೆ ಇಲ್ಲಿಯ ಸಹ ಶಿಕ್ಷಕರಾದ ಸಂಧ್ಯಾ ನಾಡಿಗ್ ಹಾಗೂ ಗಣಿತ ವಿಷಯವನ್ನು ಹಿಂದು ಸೇವಾ ಪ್ರತಿಷ್ಠಾನದ ಪೂರ್ಣಾವಧಿ ಕಾರ್ಯಕರ್ತರು ಹಾಗೂ ಮೂರ್ಕಜೆ ಮೈತ್ರೇಯಿ ಗುರುಕುಲದ ಗಣಿತ ಶಿಕ್ಷಕರಾದ ನೇತ್ರ ಮಾತಾಜಿ ನಡೆಸಿಕೊಟ್ಟರು. ನಾಲ್ಕು ದಿನದ ಪ್ರಶಿಕ್ಷಣ ಕಾರ್ಯಾಗಾರದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ, ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಹ ಸಂಚಾಲಕರಾದ ರಮೇಶ್ ಎನ್., ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರಾದ ಚೆನ್ನಪ್ಪ ಆರ್ ಕೋಟ್ಯಾನ್, ರಾಷ್ಟ್ರಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯರಾದ ಕಮಲ ಪ್ರಭಾಕರ್ ಭಟ್, ವಿದ್ಯಾಕೇಂದ್ರದ ಕೋಶಾಧಿಕಾರಿಯಾಗಿ ಸತೀಶ್ ಭಟ್, ಶಿವಗಿರಿ ಆಡಳಿತ ಮಂಡಳಿ ಸದಸ್ಯರು ಹಾಗೂ ಪ್ರಾಥಮಿಕ ಶೈಕ್ಷಣಿಕ ಪರಿವೀಕ್ಷಕರಾದ ಮಲ್ಲಿಕಾ ಶೆಟ್ಟಿ, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಸಾಲ್ಯಾನ್ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು